ಮೈಸೂರು ಜಿಲ್ಲೆಯಲ್ಲೂ ಹೆಚ್ಚಿದ ಡೆಂಘೆ ಪ್ರಕರಣ

Dengue
Published on

ಅವಿನಾಶ್ ಜೈನಹಳ್ಳಿ ಮೈಸೂರು
ಇತ್ತೀಚೆಗಷ್ಟೇ ಕಾಲರಾದಿಂದ ನಲುಗಿರುವ ಜಿಲ್ಲೆಯ ಜನತೆಯನ್ನು ಈಗ ‘ಡೆಂೆ’ ಮಹಾಮಾರಿ ಕಾಡುತ್ತಿದೆ. ರಾಜ್ಯದಲ್ಲಿ ಡೆಂೆ ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳ ಪೈಕಿ ಮೈಸೂರು ಜಿಲ್ಲೆಯೂ ಒಂದಾಗಿದೆ.
ಜಿಲ್ಲೆಯಲ್ಲಿ ಅನೇಕ ವರ್ಷಗಳ ಬಳಿಕ ಮತ್ತೆ ಡೆಂೆ ಮಹಾಮಾರಿ ಹೆಚ್ಚಾಗಿ ಕಾಡಲು ಶುರು ಮಾಡಿದೆ. ಡೆಂೆಯಿಂದ ಬಳಲುತ್ತಿರುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲೇ ಹೆಚ್ಚಾಗಿದ್ದು, ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ 100ರ ಗಡಿ ದಾಟಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ ನಿತ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ.
ಜ.1ರಿಂದ ಜೂ.28 ರವರೆಗೆ 479 ಪ್ರಕರಣಗಳು ದಾಖಲಾಗಿವೆ. ಈ ವಾರ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳ ಮುನ್ನೆಚ್ಚರಿಕೆಯಿಂದಾಗಿ ಜಿಲ್ಲೆಯಲ್ಲಿ ಒಂದು ಸಾವು ಮಾತ್ರ ಸಂಭವಿಸಿದ್ದು, ದೊಡ್ಡ ಮಟ್ಟದ ಅನಾಹುತ ತಪ್ಪಿಸಲಾಗಿದೆ. ಜಿಲ್ಲೆಯಲ್ಲಿ ಜೂ.28 ರವರೆಗೆ 3,489 ಜನರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ.
2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಡೆಂೆ ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ 182 ಪ್ರಕರಣಗಳು ಕಂಡು ಬಂದಿದ್ದವು. 2022 ರಲ್ಲಿ 400 ಹಾಗೂ 2023ರಲ್ಲಿ 360 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ ಜುಲೈ ಆರಂಭದಲ್ಲೇ 500ರ ಗಡಿ ತಲುಪಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯ ಜತೆ ಕೈ ಜೋಡಿಸದಿದ್ದರೆ ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

ಆರೋಗ್ಯ ಇಲಾಖೆಯಿಂದ ಕ್ರಮ

ಈ ಸಂಬಂಧ ಆರೋಗ್ಯ ಇಲಾಖೆ ಡೆಂೆ ನಿಯಂತ್ರಣಕ್ಕೆ ನಿರಂತರ ಕ್ರಮ ವಹಿಸಿದೆ. ಡಿಸೆಂಬರ್ ತಿಂಗಳಲ್ಲಿ ಕೊಂಚ ಮಳೆಯಾದ ಪರಿಣಾಮ ಜನವರಿಯಲ್ಲಿ ಹೆಚ್ಚು ಡೆಂೆ ಪ್ರಕರಣ ವರದಿಯಾಗಿವೆ. ಜನವರಿಯಲ್ಲಿ 30 ಜನರಿಗೆ ಕಾಣಿಸಿಕೊಂಡಿತ್ತು. ಬಳಿಕ ಪ್ರತಿ ತಿಂಗಳು ಸರಾಸರಿ 20 ರಿಂದ 25 ಪ್ರಕರಣಗಳು ವರದಿಯಾಗಿವೆ. ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಮನೆ ಸುತ್ತಮುತ್ತ ಮಳೆ ನೀರು ಮಡುಗಟ್ಟಿ ನಿಂತು ಡೆಂೆ ಹರಡುವ ‘ಈಡೀಸ್’ ಸೊಳ್ಳೆಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗಿವೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಡೆಂೆ ಇನ್ನೂ ಮೂರು ತಿಂಗಳ ಕಾಲ ಕಾಡಲಿದೆ. ಹಾಗಾಗಿ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.

ನಗರದಲ್ಲಿಯೇ ಅಧಿಕ!

ಈ ಬಾರಿ ಮೈಸೂರು ನಗರದಲ್ಲಿಯೇ ಹೆಚ್ಚಾಗಿ ಡೆಂೆ ಪ್ರಕರಣ ಕಂಡು ಬಂದಿರುವುದು ವರದಿಯಾಗಿದೆ. ನಗರ ವ್ಯಾಪ್ತಿಯಲ್ಲಿ ಜೂ. 28ರವೆಗೆ 1,092 ಜನರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, 196ಕ್ಕೂ ಹೆಚ್ಚು ಪ್ರಕರಣ ನಗರದಲ್ಲಿಯೇ ವರದಿಯಾಗಿವೆ. ಮಂಡಿ ಮೊಹಲ್ಲಾ, ರಾಜೀವನಗರ, ರಾಮಕೃಷ್ಣನಗರ, ಸರಸ್ವತಿಪುರಂ, ಜನತಾನಗರ, ಹೆಬ್ಬಾಳು, ಕುವೆಂಪುನಗರ ಸೇರಿದಂತೆ ನಗರದ ಎಲ್ಲೆಡೆ ಪ್ರಕರಣಗಳು ಪತ್ತೆಯಾಗಿವೆ.

ತಾಲೂಕುವಾರು ಮಾಹಿತಿ

ಮೈಸೂರು ನಗರ ಬಿಟ್ಟರೆ ಹುಣಸೂರು ತಾಲೂಕಿನಲ್ಲಿ 93, ಮೈಸೂರು ತಾಲೂಕು(ಗ್ರಾಮಾಂತರ) 62, ಪಿರಿಯಾಪಟ್ಟಣ ತಾಲೂಕಿನಲ್ಲಿ 42, ಕೆ.ಆರ್.ನಗರ ತಾಲೂಕಿನಲ್ಲಿ 31 ಪ್ರಕರಣಗಳು ಕಂಡುಬಂದಿವೆ. ತಿ.ನರಸೀಪುರದಲ್ಲಿ 10, ನಂಜನಗೂಡು ತಾಲೂಕಿನಲ್ಲಿ 24, ಎಚ್.ಡಿ.ಕೋಟೆ ತಾಲೂಕಿನಲ್ಲಿ 21 ಪ್ರಕರಣ ಪತ್ತೆಯಾಗಿವೆ. 2017-18ನೇ ಸಾಲಿನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದ ಮೈಸೂರಿನ ಮಹದೇವಪುರ, ಕೆಸರೆ, ಗಿರಿಭೋವಿಪಾಳ್ಯ, ನಂಜನಗೂಡಿನ ನೀಲಕಂಠನಗರ, ಹುಣಸೂರಿನ ಶಬೀರ್‌ನಗರದಲ್ಲಿ ಪ್ರಕರಣದ ಸಂಖ್ಯೆ ಕೊಂಚ ಕಡಿಮೆ ಇದೆ. ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ಅರಿವು ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಿದೆ.
ಡೆಂೆ ಪ್ರಕರಣಗಳ ಪೈಕಿ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಮೈಸೂರಿನಲ್ಲಿ ಡೆಂೆ ಪ್ರಕರಣ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂದಿನ ಮೂರು ತಿಂಗಳು ಎಚ್ಚರಿಕೆ ವಹಿಸಬೇಕಾಗಿದೆ.

ಮುನ್ನೆಚ್ಚರಿಕೆ ಕ್ರಮಗಳೇನು?

ಮಳೆ ನೀರು ಒಂದೇ ಕಡೆ ಸಂಗ್ರಹವಾಗಿದ್ದರೆ ಸೊಳ್ಳೆಗಳ ಸಂತತಿ ಹೆಚ್ಚಾಗಲಿದೆ. ಹಾಗಾಗಿ, ಮಳೆ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬೇಕು. ಹೂವಿನಕುಂಡ, ಬಿಸಾಡಿದ ಟಯರ್, ತೊಟ್ಟಿ, ನೀರಿನ ಬಾಟಲಿಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಅಂಥ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ಶುಚಿಗೊಳಿಸಬೇಕು. ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶವಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆಗಳ ತಾಣಗಳನ್ನು ಗುರುತಿಸಿ ನಾಶಪಡಿಸಬೇಕು. ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಹೆಚ್ಚು ದಿನಗಳ ಕಾಲ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಇಂಥ ಸ್ಥಳಗಳನ್ನು ಗುರುತಿಸಿ, ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಸಂತತಿಯನ್ನು ನಾಶಪಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಪಿ.ಸಿ.ಕುಮಾರಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಡೆಂೆ ಸೇರಿದಂತೆ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ನಮ್ಮ ಇಲಾಖೆ ವರ್ಷಪೂರ್ತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net