

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಚಿಕ್ಕಹಂದಿಗೊಳ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರದಲ್ಲಿ ಬುಧವಾರ ಹಿರಿಯ ನಾಗರಿಕರಿಗಾಗಿ ಆರೋಗ್ಯ ತಪಾಸಣೆ ಹಾಗೂ ಡೆಂಘಿ ಜಾಗೃತಿ ಕಾರ್ಯಕ್ರಮ ಜರುಗಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್ ಉಪ್ಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಪದ್ಧತಿಯ ಪಂಚಕರ್ಮ ಜೀವನಶೈಲಿ ರೂಡಿಸಿಕೊಳ್ಳಲು ಸಲಹೆ ನೀಡಿದರು. ದಿನಚರ್ಯ, ಋತುಚರ್ಯ ಬಗ್ಗೆ ತಿಳಿಸಿ ಡೆಂಘಿ ಬಗ್ಗೆ ಜಾಗೃತಿ ಮೂಡಿಸಿದರು.
ಡಾ. ಫಿಲೋಮಿನಾ ಅವರು ಕಾರ್ಯಕ್ರಮದಲ್ಲಿ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಿದರು. ಆರೋಗ್ಯ ಕ್ಷೇಮ ಕೇಂದ್ರದ ದೀಪಕ ಗಂಜಿ ರೋಗಿಗಳ ಬಿಪಿ, ಶುಗರ್ ತಪಾಸಣೆ ಮಾಡಿದರು. ಒಟ್ಟು 142 ರೋಗಿಗಳನ್ನು ತಪಾಸಣೆ ಮಾಡಲಾಯಿತು.
ಡಾ. ಕಮಲಾಕರ, ತಿರುಕಪ್ಪ ತಳವಾರ, ದಾದಾಪೀರ ಅಣ್ಣಿಗೇರಿ, ದೇವಪ್ಪ ಸೈದಾಪುರ, ಮಲ್ಲಿಕಾರ್ಜುನ ಕುರ್ತಕೋಟಿ, ಆರ್. ವಿ. ಗೊಂಡಬಾಳ, ಚಂದ್ರು ಹುನಕುಂಟಿ, ಸಿದ್ದಯ್ಯ ಗುಡ್ಡಿಮಠ ಹಲವರು ಇದ್ದರು.