

ಮಂಡ್ಯ: ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಕಾವೇರಿ ಪಬ್ಲಿಕ್ ಸ್ಕೂಲ್‌ನಲ್ಲಿ ತೂಬಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಡೆಂಘೆ ಜ್ವರ ಹರಡುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೈದ್ಯಾಧಿಕಾರಿ ಡಾ.ಪದ್ಮಜಾ ಮಾತನಾಡಿ, ಸೊಳ್ಳೆಗಳು ಹರಡುವ ರೀತಿಯ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಆ ಮೂಲಕ ಎಚ್ಚರಿಕೆಯಿಂದ ಇರಬೇಕು. ಜ್ವರ ಬಂದರೆ ಅದನ್ನು ನಿರ್ಲಕ್ಷ್ಯ ವಹಿಸದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಥವಾ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರದೀಪ್‌ಕುಮಾರ್, ಆಶಾ ಕಾರ್ಯಕರ್ತೆ ಸವಿತಾ ಇತರರಿದ್ದರು. ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ರೋಗ ಹರಡುವ ಬಗ್ಗೆ ಬಿತ್ತಿಪತ್ರಗಳನ್ನು ನೀಡುವ ಜಾಗೃತಿ ಮೂಡಿಸಲಾಯಿತು.