

ಕೊಪ್ಪಳ: ಡೆಂ ಪ್ರಕರಣ ಹೆಚ್ಚುತ್ತಿವೆ. ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡಿದಂತೆ ಡೆಂ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆರೋಗ್ಯಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಡೆಂಗೆ ರ್ನಿದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಬೇಕು. ಕೋವಿಡ್ಗೂ ಚಿಕಿತ್ಸೆ ಇರದ ಕಾರಣ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಯಿತು. ಆರೊಗ್ಯ ತುರ್ತು ಪರಿಸ್ಥಿತಿ ಎಂದುಕೊಂಡೇ ಕೆಲಸ ಮಾಡಿ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಸೊಳ್ಳೆಯಿಂದ ರೋಗ ಹರಡುತ್ತದೆ. ಮುಖ್ಯವಾಗಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮವಾಗಲಿ. ಸಾರ್ವಜನಿಕರು ತೆರೆದ ರೀತಿಯಲ್ಲಿ ನೀರು ಸಂಗ್ರಹಿಸಬಾರದು. ಸೊಳ್ಳೆ ನಿವಾರಕ, ಪರದೆಗಳನ್ನು ಬಳಸಿ. ನಗರ, ಸ್ಥಳಿಯ ಸಂಸ್ಥೆಯವರು ನಿಯಮಿತವಾಗಿ ಜನರಿಗೆ ಅರಿವು ಮೂಡಿಸಿ. ವಸತಿ ನಿಲಯಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮವಾಗಲಿ. ನೀರು ಸಂಗ್ರಹಾರಗಳಲ್ಲಿ ಲಾರ್ವಾಹಾರಿ ಮೀನು ಬಿಡುವಂತೆ ಸಲಹೆ ನೀಡಿದರು.
ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಡೆಂ ವಿಷಯ ಕುರಿತು ಪ್ರಬಂಧ, ರಸಪ್ರಶ್ನೆ, ಭಾಷಣ ಸ್ಪರ್ಧೆ ಆಯೋಜಿಸಿ ಜಾಗೃತಿ ಮೂಡಿಸಿ. ಜಾಥಾ ಹಮ್ಮಿಕೊಳ್ಳಿ. ವಿದ್ಯಾರ್ಥಿಗಳಿಂದಲೇ ಅವರ ಮನೆ, ಗ್ರಾಮಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ. ಪಿಡಿಒಗಳು ವಾರಕ್ಕೊಮ್ಮೆ ಆರೋಗ್ಯ ಸಭೆ ನಡೆಸಿ. ನ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ಮಾಡಿ. ಚರಂಡಿ ಹೂಳು ತೆರವುಗೊಳಿಸಿ. ಅಂಗನವಾಡಿ, ಶಾಲೆಗಳು ಸೊಳ್ಳೆ ಮುಕ್ತಗೊಳ್ಳಲಿ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಡೆಂ ಜ್ವರ ಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರ ಬಳಿ ಪರೀೆ ಮಾಡಿಸಿಕೊಳ್ಳಿ. ಜನರು ಆರೋಗ್ಯ ಬಗ್ಗೆ ಕಾಳಜಿವಹಿಸಿ. ಸ್ವಚ್ಛತೆಗೆ ಆದ್ಯತೆ ನೀಡಿ. ಜುಲೈವರೆಗೆ 2,435 ಮಾದರಿ ಸಂಗ್ರಹಿಸಿದ್ದು, 131 ಜ್ವರ ಪ್ರಕರಣ ದೃಢಪಟ್ಟಿವೆ. ಚಿಕೂನ್ ಗುನ್ಯಾಕ್ಕೆ ಸಂಬಂಧಿಸಿದಂತೆ 411 ಮಾದರಿ ಪರೀಸಿದ್ದು, 10 ದೃಢಪಟ್ಟಿವೆ ಎಂದರು.
ಡಿಎಚ್ಒ ಡಾ.ಟಿ.ಲಿಂಗರಾಜು, ಡಿಎಸ್ಒ ಡಾ.ನಂದಕುಮಾರ, ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಡಿಟಿಒ ಡಾ.ಶಶಿಧರ ಎ., ಡಿಎಲ್ಒ ಡಾ.ಪ್ರಕಾಶ ಎಚ್. ಸಿಎಂಒ ಡಾ.ಈಶ್ವರ ಸವಡಿ, ಕಿಮ್ಸ್ ಎಚ್ಒಡಿ ಡಾ.ನಾರಾಯಣಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ಇತರರಿದ್ದರು.