

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾದ್ಯಂತ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮಗಳು ಲನೀಡಿವೆ. ಮಾರಣಾಂತಿಕವಾಗಬಹುದಾದ ಡೆಂಘೆ ರೋಗದ ಬಗ್ಗೆ ಜಿಲ್ಲೆಯ ಜನರು ಜಾಗೃತರಾಗುವ ಮೂಲಕ ಡೆಂಘೆ ಹಾವಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಉಲ್ಬಣಗೊಳ್ಳುವ ಡೆಂಘೆ ಪ್ರಕರಣಗಳಲ್ಲಿ ಸಾಕಷ್ಟು ಮಂದಿ ಜ್ವರ ಮತ್ತಿತರ ಸೋಂಕುಗಳಿಂದ ಬಳಲುವುದು ಸಾಮಾನ್ಯ. ಆಸ್ಪತ್ರೆಗಳಲ್ಲಿ ಬಾಧಿತರು ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಈ ಬಾರಿ ಮಳೆಗಾಲದಲ್ಲಿ ಇಂಥ ಪರಿಣಾಮ ನಿಯಂತ್ರಣಕ್ಕೆ ಬಂದಿದ್ದು, ಜಿಲ್ಲಾ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳು ಯಶ ಕಂಡಿವೆ ಎಂಬ ಮಾತು ಕೇಳಿಬರುತ್ತಿವೆ.
68 ಪ್ರಕರಣಕ್ಕೆ ಸೀಮಿತ: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 68 ಪ್ರಕರಣಗಳು ಮಾತ್ರ ವರದಿಯಾಗಿದೆ. ಕಳೆದ ವರ್ಷ 272 ಡೆಂಘೆ ಪ್ರಕರಣಗಳು ಪತ್ತೆಯಾಗಿತ್ತು. ಮಳೆಗಾಲ ಕೊನೆಯಾಗುವ ಸಮಯದಲ್ಲಿ ಕಡಿಮೆ ಪ್ರಮಾಣದ ಪ್ರಕರಣಗಳು ಕಂಡುಬಂದಿರುವುದು ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಕ್ಕೆ ಲಸಿಕ್ಕಂತಾಗಿದೆ.68 ಪ್ರಕರಣಗಳಲ್ಲಿ ಎಲ್ಲರೂ ಚೇತರಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಣದಿನದ ಎೆಕ್ಟ್: ತಿಂಗಳಲ್ಲಿ ಪ್ರತೀ ಶುಕ್ರವಾರ ಆರೋಗ್ಯ ಸಿಬ್ಬಂದಿ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ವೇಳೆ ನೀರು ಸಂಗ್ರಹಣೆ ಮಾಡುವ ಸ್ಥಳಗಳಲ್ಲಿ ಲಾರ್ವಾ ಪತ್ತೆಯಾದರೆ ಇದರಲ್ಲಿನ ನೀರನ್ನು ಸಂಪೂರ್ಣ ಹೊರಹಾಕಿ ಒಂದು ದಿನ ‘ಒಣ ದಿನ’ ಎಂಬ ಪರಿಕಲ್ಪನೆ ಮೂಲಕ ಡೆಂಘೆ ನಿಯಂತ್ರಣ ಮಾಡಲಾಗುತ್ತಿದೆ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಪ್ರತಿ ಮಂಗಳವಾರ ಲಾರ್ವಾ ಸರ್ವೆ ಮಾಡಲಾಗುತ್ತದೆ. ಇದೇ ರೀತಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಡೆಂಘೆ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ಆರೋಗ್ಯ ಇಲಾಖೆ ಮುಂಜಾಗ್ರತಾಕ್ರಮಗಳನ್ನು ಅನುಸರಿಸುತ್ತಿದೆ.
ಜಾಗೃತಿ ಕಾರ್ಯಕ್ರಮಗಳು ಚುರುಕು: ಜಿಲ್ಲಾ ಆರೋಗ್ಯ ಇಲಾಖೆ ಡೆಂಘೆ, ಚಿಕೂನ್‌ಗುನ್ಯಾ, ಮಲೇರಿಯಾ ಸೇರಿ ವಿವಿಧ ಸಾಂಕ್ರಾಮಿಕಗಳಿಗೆ ಸಂಬಂಧಪಟ್ಟಂತೆ ಪ್ರತಿ ಗ್ರಾಮ ಪಂಚಾಯಿತಿವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದರಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಲಾರ್ವಾ ಸರ್ವೆ: ಜಿಲ್ಲೆಯಾದ್ಯಂತ ವೈದ್ಯರ ತಂಡ ಸೇರಿ ಆಶಾ ಕಾರ್ಯಕರ್ತೆಯರು, ಮನೆ ಮನೆಗೆ ತೆರಳಿ ಲಾರ್ವಾ ಸರ್ವೆ ನಡೆಸುತ್ತಿದ್ದಾರೆ. ಎಲ್ಲಿಯಾದರೂ ಲಾರ್ವಾ ಪತ್ತೆಯಾದರೆ ತಕ್ಷಣ ಅದನ್ನು ನಾಶಪಡಿಸುವ ಕೆಲಸ ಮಾಡಲಾಗುತ್ತಿದೆ, ಮನೆಗಳಲ್ಲಿ ನೀರು ಸಂಗ್ರಹಣೆ ಮಾಡುವ ಸ್ಥಳಗಳ ಪರಿಶೀಲನೆ ನಡೆಸಿ ಸ್ವಚ್ಛತೆ ಕಾಪಾಡುವಂತೆ ತಿಳುವಳಿಕೆ ನೀಡಲಾಗುತ್ತಿದೆ, ಡೆಂಘೆ ರೋಗದ ಲಕ್ಷಣಗಳೇನು? ಬಾಧಿತರು ಕೈಗೊಳ್ಳಬೇಕಾದ ಕ್ರಮವೇನು ? ಚಿಕಿತ್ಸೆ ಹೇಗೆ ಎಂಬುದರ ಮಾಹಿತಿ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಇಂಥ ಪ್ರಕರಣಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಡೆಂಘೆ ಪ್ರಕರಣಗಳು ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ. ಮಳೆಗಾಲ ಕೊನೆಗೊಳ್ಳುವ ಇದುವರೆಗಿನ ಮಾಹಿತಿಯಂತೆ ಸುಮಾರು 68 ಪ್ರಕರಣಗಳಷ್ಟೇ ಪತ್ತೆಯಾಗಿವೆ. ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಸಾಂಕ್ರಾಮಿಕ ರೋಗಗಳ ಜಾಗೃತಿ ಕಾರ್ಯಕ್ರಮಗಳು ಲ ನೀಡಿವೆ. ಸಾರ್ವಜನಿಕರು ಜಾಗೃತರಾಗಿತ್ತಿರುವುದು ಪ್ರಕರಣಗಳ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಉಳಿದಂತೆ ಇಲಾಖೆ ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ.
ಡಾ. ಲಕ್ಕ ಕೃಷ್ಣಾರೆಡ್ಡಿ. ಜಿಲ್ಲಾ ಆರೋಗ್ಯಾಧಿಕಾರಿ ಬೆಂ.ಗ್ರಾಮಾಂತರ
---