

ಕವಿತಾಳ: ಮಳೆಗಾಲ ಇರುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕಿ ಬಸಮ ್ಮ ಹೇಳಿದರು.
ಇದನ್ನೂ ಓದಿ:ಡೆಂೆ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಿ
ಸಮೀಪದ ಬಸ್ಸಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಡೆದ ಡೆಂಘೆ ಜಾಗೃತಿ ಜಾಥದಲ್ಲಿ ಶನಿವಾರ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದರಶೇಖರ ದೊಡ್ಡಮನಿ ಆದೇಶ ಹಿನ್ನೆಲೆಯಲ್ಲಿ ಡೆಂಘೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಳೆ ನೀರು ಮತ್ತು ಕಲುಷಿತ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ವಿದ್ಯಾರ್ಥಿಗಳು ಪಾಲಕರಿಗೆ ಮನೆ ಮತ್ತು ಸುತ್ತಮುತ್ತಲಿನ ಸ್ವಚ್ಚತೆ ಕ್ರಮ ಬಗ್ಗೆ ತಿಳಿಸಿಬೇಕು ಎಂದರು. ಪ್ರಮುಖ ಬೀದಿಗಳಲ್ಲಿ ಜಾಥ ಕಾರ್ಯಕ್ರಮ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ಸೊಮಣ್ಣ ನಾಯಕ, ಶಿಕ್ಷಕಿಯರಾದ ಹುಸೇನಭಿ, ಮಹೇಂದ್ರ, ಬಸವಲಿಂಗಯ್ಯ, ಆರುಂದತಿ ಅಗ್ನಿ, ಮಾಜಿ ತಾಪಂ ಸದಸ್ಯ ಶಿವಕುಮಾರ, ರಾಜಸಾಬ್, ಮೌಲಪ್ಪ, ಚಂದಪ್ಪ, ರಮೇಶ, ರಂಗಪ್ಪ, ಹುಲುಗಪ್ಪ, ಮೂಕಪ್ಪ ಇತರರಿದ್ದರು.