ಪಿಲಿಕುಳದಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನ ಪ್ರದರ್ಶನ, ಮಾರಾಟ

Pilikula
ಪಿಲಿಕುಳದ ಅರ್ಬನ್ ಹಾಥ್‌ನಲ್ಲಿ ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
Published on

ಗುರುಪುರ: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪಿಲಿಕುಳದ ಅರ್ಬನ್ ಹಾಥ್‌ನಲ್ಲಿ ಎರಡು ದಿನಗಳ ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ-2023ವನ್ನು ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಉದ್ಘಾಟಿಸಿದರು.

ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಅನಿಲ್‌ಕುಮಾರ್, ಸದಸ್ಯ ಸುನೀಲ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಿಷೇಕ್ ವಿ., ಪಿಲಿಕುಳ ಆಡಳಿತಾಧಿಕಾರಿ ಮನೀಶ್ ನಾಯ್ಕ, ಬಾಟನಿಕಲ್ ವಿಭಾಗದ ಅಧಿಕಾರಿ ಡಾ.ಸೂರ್ಯಪ್ರಕಾಶ್ ಶೆಣೈ, ಡಾ.ಪ್ರಸನ್ನ ರೈ, ವಿಜ್ಞಾನ ಕೇಂದ್ರದ ಅಧಿಕಾರಿ ಡಾ.ಕೆ.ವಿ.ರಾವ್, ಪಿಲಿಕುಳ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ನಿತಿನ್, ಸ್ಥಳೀಯ ಮುಖಂಡರಾದ ಪ್ರಾಧಿಕಾರದ ಸದಸ್ಯ ಹರೀಶ್ ಕೆ., ಉಮೇಶ್ ಜೆ., ಜಯರಾಮ ಕೊಟ್ಟಾರಿ, ವೀರಪ್ಪ ಎಸ್., ಪ್ರಗತಿಪರ ಕೃಷಿಕ ರಮಾನಾಥ ಅತ್ತರ್(ಚಿತ್ತಣ್ಣ) ಮತ್ತಿತರರು ಉಪಸ್ಥಿತರಿದ್ದರು.

100ಕ್ಕೂ ಅಧಿಕ ಮಳಿಗೆ

100ಕ್ಕೂ ಹೆಚ್ಚು ಹಣ್ಣು, ಗಿಡ, ಪುಸ್ತಕ ಮಳಿಗೆ ಹಾಗೂ ಇತರ ಗುಡಿ ಕೈಗಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸ್ಟಾಲ್‌ಗಳು ಮೇಳದಲ್ಲಿ ಒಳಗೊಂಡಿವೆ. ಮೇಳದೊಳಗೆ ಪ್ರವೇಶಿಸುತ್ತಿದ್ದಂತೆ ಹಲಸಿನ ಸುವಾಸನೆ ಮೂಗಿಗೆ ಬಡಿಯುವಂತಿದೆ. ಕೇಸರಿ ಹಲಸು, ಹಲಸು ಮತ್ತು ಮಾವಿನ ಕಸಿ ತಳಿಗಳ ಗಿಡಗಳು, ವಿಭಿನ್ನ ತಳಿಯ ಮಾವು ಹೆಚ್ಚಿನ ಗ್ರಾಹಕರ ಗಮನಸೆಳೆದಿವೆ. ರಾಂಬೂಟನ್, ಡ್ರಾಗನ್ ಫ್ರೂಟ್ಸ್, ಹಲಸಿನ ಹಪ್ಪಳ, ಹಲಸಿನ ಪಚ್ಚಿರ್ ಮತ್ತು ಇತರ ಖಾದ್ಯ, ಉಪ್ಪಿನಕಾಯಿ, ಗಿಡಮೂಲಿಕೆ ಸೊತ್ತುಗಳು, ಪುಸ್ತಕ ಮಳಿಗೆ, ಕತ್ತಿ ಮತ್ತು ನಾರಿನ ಹೆಣೆದ ಗೃಹೋಪಯೋಗಿ ಪರಿಕರಗಳು, ಜೇನು ಮತ್ತಿತರ ಸೊತ್ತುಗಳು ಮಾರಾಟಕ್ಕಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net