

ಮೈಸೂರು: ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ವತಿಯಿಂದ ಜಿಲ್ಲಾ ಮಟ್ಟದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಕಚೇರಿಯ ಆವರಣದಲ್ಲಿರುವ ವೈದ್ಯರ ಭವನದಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸಿ. ಸುವರ್ಣ, ಜಿಲ್ಲಾ ಆರೋಗ್ಯ ಮತು ್ತಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ತೀರ್ಪುಗಾರರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
5 ರಿಂದ 7ನೇ ತರಗತಿ, 8 ರಿಂದ 10ನೇ ತರಗತಿಯ ಮಕ್ಕಳು ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ನಂಜನಗೂಡು ಅಶೋಕಪುರಂನ ಸ.ಹಿ.ಪ್ರಾ.ಶಾಲೆಯ ನಂದಿನಿ, ದ್ವಿತೀಯ ಬಹುಮಾನವನ್ನು ಅರಸನಕೆರೆಯ ಸ.ಹಿ.ಪ್ರಾ.ಶಾಲೆಯ ಸಂಗೀತ, ತೃತೀಯ ಬಹುಮಾನವನ್ನು ಹೂಟಗಳ್ಳಿಯ ಸ.ಹಿ.ಪ್ರಾ.ಶಾಲೆಯ ಪ್ರೀತಮ್‌ಕುಮಾರ್ ಮತ್ತು ಬಾಲಾಜಿ ಪಡೆದುಕೊಂಡರು.
ಫ್ರೌಢ ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಹುಣಸೂರಿನ ಮನುಗನಹಳ್ಳಿಯ ಸ.ಪ್ರೌ.ಶಾಲೆಯ ಸಿ.ಸಿಂಚನಾ, ದ್ವಿತೀಯ ಬಹುಮಾನವನ್ನು ಎಚ್.ಡಿ. ಕೋಟೆಯ ಮಾದಾಪುರದ ಸ.ಪ್ರೌ.ಶಾಲೆಯ ಸುಶ್ಮಿತಾ, ತೃತೀಯ ಬಹುಮಾನವನ್ನು ಕೆ.ಆರ್.ನಗರದ ಆದರ್ಶ ವಿದ್ಯಾಲಯದ ಭಾವನ ಪಡೆದುಕೊಂಡರು.