ಕಟ್‌ಬೆಲ್ತೂರ್ ರೈತರಿಗೆ ಯಂತ್ರ ನಾಟಿ ಪ್ರಾತ್ಯಕ್ಷಿಕೆ

gan (5)
Published on

ಕುಂದಾಪುರ: ಕೃಷಿಕರಿಗೆ ಸರಿಯಾದ ಸೌಲಭ್ಯ, ಅವರಿಗೆ ತೊಂದರೆಯಾದಾಗ ಸಂಬಂಧಪಟ್ಟ ಇಲಾಖೆಯವರು ಸಹಕರಿಸಿದರೆ ಕೃಷಿ ಉಳಿಸಿಕೊಳ್ಳಲು ಸಾಧ್ಯ ಎಂದು ಕುಂದಾಪುರ ರೋಟರಿ ಮಿಡ್ ಟೌನ್ ಅಧ್ಯಕ್ಷ ಸುನೀಲ್ ಕುವಾರ್ ಶೆಟ್ಟಿ ಹೇಳಿದರು.

ಕುಂದಾಪುರ ರೋಟರಿ ಮಿಡ್ ಟೌನ್ ವತಿಯಿಂದ ಕಟ್‌ಬೇಲ್ತೂರು ಗ್ರಾಮದ ಹರೆಗೋಡು ಎಂಬಲ್ಲಿ ಬುಧವಾರ ನಡೆದ ನಾಟಿ ಯಂತ್ರ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ವಾತನಾಡಿದರು.

ರೈತರಿಗೆ ರೈನ್ ಕೋಟ್ ವಿತರಿಸಲಾಯಿತು. ಕುಂದಾಪುರ ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಸುಕುವಾರ ಶೆಟ್ಟಿ, ಶಂಕರ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಉದಯ್ ಕುವಾರ್ ಶೆಟ್ಟಿ, ಸ್ಥಳೀಯ ರೈತರಾದ ಶ್ರೀನಿವಾಸ ಗಾಣಿಗ, ನರಸಿಂಹ ಗಾಣಿಗ, ಸುಬ್ಬ ದೇವಾಡಿಗ, ಕಷ್ಣ ಗಾಣಿಗ ಮಹಾಬಲ ಗಾಣಿಗ, ಕೊಗ್ಗ ಗಾಣಿಗ, ಸಂಜು ದೇವಾಡಿಗ, ಸ್ಥಳೀಯ ರೈತ ಮಹಿಳೆಯರು ಭಾಗವಹಿಸಿದ್ದರು. ಕಷಿಕ ರಾಜು ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net