ಸರ್ವಜ್ಞ ವೃತ್ತದ ವಿಘ್ನೇಶ್ವರ ಮೂರ್ತಿ ವಿಸರ್ಜನೆ

HKR 1
Published on

ಹಿರೇಕೆರೂರ: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದ ವತಿಯಿಂದ ವಿಘ್ನೇಶ್ವರ ಮೂರ್ತಿಯನ್ನು ಶುಕ್ರವಾರ ಸಂಜೆ ಮೆರವಣಿಗೆಯೊಂದಿಗೆ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಡಿ.ಜೆ. ಸೌಂಡ್ ಸಿಸ್ಟ್ಟಮ್, ವಿವಿಧ ಕಲಾ ತಂಡಗಳು, ಕರಡಿ, ಹನುಮಂತ ವೇಷಧಾರಿ, ಹಲಗೆ, ಜಾಂಜ್, ವಾಲಗ, ವಾದ್ಯ ಮೇಳಗಳು ಗಮನಸೆಳೆದವು. ಸಾವಿರಾರು ಹಿಂದು ಕಾರ್ಯಕರ್ತರು ಕೈಯಲ್ಲಿ ಭಗವಾಧ್ವಜ ಹಿಡಿದು ಜಯಘೋಷ ಹಾಕಿದರು.

ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿತ್ತು. ನಂತರ ಮಾಸೂರು ರಸ್ತೆಯಲ್ಲಿರುವ ಕುಬಸದ ಕಟ್ಟೆ ಕೆರೆಯಲ್ಲಿ ಗಣಪತಿಯನ್ನು ಧಾರ್ಮಿಕ ಕೈಂಕರ್ಯ ನೆರವೇರಿಸಿ ವಿಸರ್ಜಿಸಲಾಯಿತು.

ಜಿಲ್ಲಾ ಬಜರಂಗದಳ ಸಂಚಾಲಕ ಅನಿಲ ಹಲವಾಗಿಲ, ನವೀನ ಕುರಬರ, ಗುರುರಾಜ ಕರಡಿ, ಬಸವರಾಜ ಓಲೇಕಾರ, ಜಗದೀಶ ದೊಡ್ಡಗೌಡ್ರ, ಕಿರಣ ಬೆಳಗುತ್ತಿ, ವಿನಾಯಕ ಕರ್ನೂಲ್, ರುದ್ರೇಶ ಬೇತೂರ, ಮನೋಹರ ವಡ್ಡಿನಕಟ್ಟಿ, ಅಜಿತ್ ಮರಿಗೌಡ್ರ, ಸಂತೋಷ ಬೆಳಗುತ್ತಿ, ರಾಕೇಶ ಬಾಳಿಕಾಯಿ, ರಮೇಶ ಬಂಡಿವಡ್ಡರ, ವಿಶ್ವ ಹಿಂದು ಪರಿಷತ್, ಬಜರಂಗದಳದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net