ಹಿಂದು ಮಹಾಗಣಪತಿ ವಿಸರ್ಜನೆ

mkg1
Published on

ಮಲೇಬೆನ್ನೂರು: ಪಟ್ಟಣದ ನೀರಾವರಿ ಇಲಾಖೆ ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆ ಸೋಮವಾರ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ವೈ. ಚಂದ್ರಶೇಖರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ 10ಕ್ಕೆ ಪೂಜೆ ಸಲ್ಲಿಸುವ ಮೂಲಕ ಬೃಹತ್ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್ ಚಾಲನೆ ನೀಡುವರು. ನೀರಾವರಿ ಇಲಾಖೆಯಿಂದ ಆರಂಭವಾಗುವ ಮೆರವಣಿಗೆ, ಶಿವಮೊಗ್ಗ-ಹರಿಹರ ಮುಖ್ಯರಸ್ತೆ, ಸಂತೆ ರಸ್ತೆ, ಬಸವೇಶ್ವರ ಬಡಾವಣೆ, ಬನ್ನಿ ಮಹಾಂಕಾಳಿ ಮಂಟಪ, ನಂದಿಗುಡಿ ರಸ್ತೆ ಪೇಟೆ, ಜ್ಯೋತಿ ಟಾಕೀಸ್ ರಸ್ತೆ ಮೂಲಕ ಸಂಚರಿಸಿ ಭದ್ರಾ ಚಾನಲ್‌ನಲ್ಲಿ ವಿಸರ್ಜನೆ ಆಗಲಿದೆ.

ಮೆರವಣಿಗೆಯಲ್ಲಿ ನಾಸಿಕ್ ಡೋಲ್, ತಮಟೆ, ಡೊಳ್ಳು, ವೀರಗಾಸೆ, ಚಂಡಿಕಾ ವಾದ್ಯ ಕಲಾ ಮೇಳಗಳು ಭಾಗವಹಿಸಲಿವೆ ಎಂದರು. 25 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಮಿತಿ ಸದಸ್ಯ ಪೂಜಾರ್ ರಾಜು ತಿಳಿಸಿದರು.

ಮಾರ್ಗ ಬದಲಾವಣೆ: ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹೊನ್ನಾಳಿಯಿಂದ ಹರಿಹರಕ್ಕೆ ಹೋಗುವ ವಾಹನಗಳು ಕೊಮಾರನಹಳ್ಳಿ ಚಾನಲ್ ಮೂಲಕ ಗುಡ್ಡದ ಬೇವಿನಹಳ್ಳಿ ಗ್ರಾಮ, ಜಿಗಳಿ, ಕುಂಬಳೂರು ಮಾರ್ಗವಾಗಿ ಹರಿಹರಕ್ಕೆ ಹೋಗುವುದು.
ಹರಿಹರದಿಂದ ಹೊನ್ನಾಳಿಗೆ ಹೋಗುವ ವಾಹನಗಳು ಕುಂಬಳೂರು ಗ್ರಾಮದ ಮೂಲಕ ನಿಟ್ಟೂರು, ಹರಳಹಳ್ಳಿ, ಹಾಲಿವಾಣ, ಕೊಮಾರನಹಳ್ಳಿ ಕೆರೆ ಏರಿ ಮೂಲಕ ಹೋಗಬೇಕು.
ವಾಹನಗಳ ನಿಲ್ಲುಗಡೆ ಸ್ಥಳಗಳು: ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ (ಜಿಗಳಿ ಸರ್ಕಲ್), ನಿಟ್ಟೂರ್ ರಸ್ತೆ ಗೋದಾಮು ಮುಂಭಾಗ (ನಿಟ್ಟೂರು ರಸ್ತೆ ), ಕಾಲಬೈರವೇಶ್ವರ ದೇವಸ್ಥಾನದ ಹತ್ತಿರದ ಮೈದಾನ (ಹರಳಹಳ್ಳಿ ರಸ್ತೆ ), ರಾಜಕುಮಾರ್ ಬಡಾವಣೆ ಮೈದಾನದಲ್ಲಿ ಅವಕಾಶ ಕಲ್ಪಿಸಿದೆ.
ಬಾಕ್ಸ್..
ಪೊಲೀಸ್ ಬಂದೋಬಸ್ತ್:

1 ಡಿವೈಎಸ್‌ಪಿ, 6 ಸಿಪಿಐ, 14 ಪಿಎಸ್‌ಐ, 25 ಎಎಸ್‌ಐ, 201 ಸಿಬ್ಬಂದಿ, 12 ಕೆಎಸ್‌ಆರ್‌ಪಿ ತುಕಡಿ, 12 ಡಿಎಆರ್ ತುಕಡಿ ಮತ್ತು 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ, 2 ದ್ರೋಣ್ ಬಳಸಲಾಗುವುದು ಎಂದು ಮಲೆಬೆನ್ನೂರು ಪಿಎಸ್‌ಐ ಪ್ರಭು ಕೆಳಗಿನ ಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net