ಅಪಾಯಕಾರಿ ವಾಣಿಜ್ಯ ಮಳಿಗೆ ಕಟ್ಟಡ ನೆಲಸಮ

4 (2)
Published on

ಮೈಸೂರು: ಅಗ್ರಹಾರದ ಮಹಾತ್ಮಗಾಂಧಿ ರಸ್ತೆಯಲ್ಲಿದ್ದ ಅಪಾಯಕಾರಿ ವಾಣಿಜ್ಯ ಮಳಿಗೆ ಕಟ್ಟಡವನ್ನು ಮಂಗಳವಾರ ನೆಲಸಮಗೊಳಿಸಲಾಯಿತು.

ಕುಸಿದು ಬಿದ್ದು ಪ್ರಾಣಹಾನಿಯನ್ನುಂಟು ಮಾಡುವ ಕಟ್ಟಡಗಳನ್ನು ಪಾಲಿಕೆ ಗುರುತಿಸಿದ್ದು, ಅಂತಹ ಕಟ್ಟಡಗಳನ್ನು ನೆಲಸಮಗೊಳಿಸಿ ಆತಂಕ ನಿವಾರಣೆ ಮಾಡುವ ಕಾರ್ಯಕ್ಕೆ ಪಾಲಿಕೆ ಮುಂದಾಗಿರುವ ಹಿನ್ನೆಲೆಯಲ್ಲಿ, ಈ ಕಾರ್ಯಾಚರಣೆ ನಡೆಯಿತು.

20 ವರ್ಷಗಳಿಂದ ಮುಚ್ಚಿದ್ದ ವಾಣಿಜ್ಯ ಮಳಿಗೆ ಕಟ್ಟಡ ಇದಾಗಿದ್ದು, ಶಿಥಿಲಾವಸ್ಥೆ ತಲುಪಿತ್ತು. ಈ ಕುರಿತು ಮಾಲೀಕರಿಗೆ ಪಾಲಿಕೆಯಿಂದ ಅನೇಕ ಬಾರಿ ನೋಟಿಸ್ ಕೂಡ ನೀಡಲಾಗಿತ್ತು. ಇತ್ತೀಚೆಗೆ ಕಟ್ಟಡದ ಎರಡು ಕಡೆ ಬಿರುಕು ಕಾಣಿಸಿಕೊಂಡಿದ್ದರು, ಯಾವುದೇ ಕ್ಷಣದಲ್ಲಾ ದರೂ ಕುಸಿಯುವ ಸಾಧ್ಯತೆ ಇತ್ತು. ಅಲ್ಲದೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಮಾಲೀಕರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಕಟ್ಟಡವನ್ನು ತೆರವು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net