ಪ್ರಜಾಪ್ರಭುತ್ವ ರಾಷ್ಟ್ರದ ಜನರ ಕರ್ತವ್ಯ

17-msk-2
ಮಸ್ಕಿ ಕನಕವೃತ್ತದ ಬಳಿ ಪ್ರತಿಜ್ಞಾನ ವಿಧಿ ಭೋಧಿಸಲಾಯಿತು. ಸಹಾಯಕ ಚುನಾವಣಾಧಿಕಾರಿ ಜಗಧೀಶ ಗಂಗಣ್ಣನವರ್, ತಹಸೀಲ್ದಾರ ಅರಮನೆ ಸುಧಾ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಮರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿವಲೀಲಾ ಹಾಗೂ ಇತರರು ಇದ್ದರು.
Published on

ಮಸ್ಕಿ: ಮತದಾರರೂ ಹಕ್ಕು ಚಲಾಯಿಸಲು ಜಾಗೃತಿ ಮೂಡಿಸಿ, ನಮ್ಮ ಮತ ನನ್ನ ಭವಿಷ್ಯ ಎಂಬ ಸತ್ಯದ ಅರಿವಾಗುವಂತೆ ಮನವೊಲಿಸಿ ಎಂದು ಸಹಾಯಕ ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್ ಹೇಳಿದರು.

ತಾಲೂಕು ಪಂಚಾಯಿತಿ ಹಾಗೂ ಪುರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಮತದಾನ ಪ್ರಜಾಪ್ರಭುತ್ವ ದೇಶದ ಪ್ರಜೆಗಳ ಪವಿತ್ರ ಕರ್ತವ್ಯ. ದೇಶದ ಪ್ರಗತಿ ಮತದಾನದಿಂದ ಎಂಬ ಸತ್ಯದ ಅರಿವು ಮೂಡಿಸಬೇಕು.

ನಕಾರಾತ್ಮಕವಾಗಿ ಮಾತನಾಡುವವರನ್ನೂ ಮನವೊಲಿಸಿ ಮತಚಲಾಯಿಸಲು ಪ್ರೇರೇಪಿಸಬೇಕು. ವಿಕಲಚೇತನರು, ಹಿರಿಯ ನಾಗರೀಕರಿಗೆ ಪ್ರತಿ ಮತಗಟ್ಟೆಯಲ್ಲೂ ಗಾಲಿ ಕುರ್ಚಿ ಬಳಸಲಾಗುವುದು, ಇದರ ಪ್ರಯೋಜನ ಪಡೆದು ತಪ್ಪದೇ ಮತದಾನ ಮಾಡಿ.

ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ, ಇಂತಹ ಕಾರ್ಯಗಳು ಗಮನಕ್ಕೆ ಬಂದರೆ ಕೂಡಲೇ ಚುನಾವಣಾಧಿಕಾರಿಗಳಿಗೆ ದೂರು ನೀಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಇದೇ ಮೊದಲ ಬಾರಿಗೆ 80ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ, ಈ ಸುವರ್ಣಾವಕಾಶವನ್ನು ಆಯೋಗ ಒದಗಿಸಿದೆ. ಮತದಾನ ನಮ್ಮ ಜವಾಬ್ದಾರಿ ಎಂದು ಅರಿತುಕೊಂಡು ಯುವಕರು ಅರಿವು ಮೂಡಿಸಬೇಕು ಎಂದರು.

ತಹಸೀಲ್ದಾರ್ ಅರಮನೆ ಸುಧಾ ಮಾತನಾಡಿ, ಗ್ರಾಮಗಳಲ್ಲಿ ಹಾಗೂ ನೆರೆಹೊರೆ ಕುಟುಂಬಗಳಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಿ, ಇದು ನಿಮ್ಮ ಕರ್ತವ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಉತ್ತಮ ಜನಪ್ರತಿನಿಧಿ ಆಯ್ಕೆಗೆ ಇರುವ ಸುವರ್ಣಾವಕಾಶ ಆದ್ದರಿಂದ ಎಲ್ಲರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದರು.

ಪಟ್ಟಣದ ಅಗಸಿಯಿಂದ ಆರಂಭಗೊಂಡ ಮತದಾನದ ಜಾಥಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮಾರ್ಗದುದ್ದಕ್ಕೂ ‘ನಮ್ಮ ಮತ ನಮ್ಮ ಭವಿಷ್ಯ’, ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ಮಾರಟಕ್ಕಿಲ್ಲ ಎಂಬ ಘೋಷಣೆಗಳು ಮೊಳಗಿದವು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಮರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿವಲೀಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net