ಮತದಾನದಿಂದ ಪ್ರಜಾಪ್ರಭುತ್ವ ಬಲಿಷ್ಠ

sri vote
ಶೃಂಗೇರಿಯಲ್ಲಿ ರಾಜ್ಯ ಚುನಾವಣಾ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ವಸ್ತ್ರದ್, ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಮತದಾನದ ಜಾಗೃತಿ ಮೂಡಿಸಿದರು. ವಿಜಯಕುಮಾರ್, ಪ್ರವೀಣ್, ನಂದಿತಾ, ಪಾರ್ವತಿ, ವಿದ್ಯಾರ್ಥಿಗಳು ಇದ್ದರು.
Published on

ಶೃಂಗೇರಿ: ಮತದಾನ ಮಾಡುವುದು ಪ್ರತಿ ನಾಗರಿಕನ ಹಕ್ಕು. ಪ್ರಜಾಪ್ರಭುತ್ವ ಬಲಿಗೊಳಿಸುವಲ್ಲಿ ಯುವಪೀಳಿಗೆ ಜವಾಬ್ದಾರಿ ನಿಭಾಯಿಸಬೇಕು ಎಂದು ರಾಜ್ಯಚುನಾವಣಾ ಸ್ವೀಪ್ ನೋಡೆಲ್ ಅಧಿಕಾರಿ ಪಿ.ವಸ್ತ್ರದ್ ಹೇಳಿದರು.

ಶನಿವಾರ ತಾಲೂಕು ಆಡಳಿತ ಹಾಗೂ ತಾಪಂ ಆಯೋಜಿಸಿದ್ದ ಸ್ವೀಪ್ ಜಾಗೃತಿ ಜಾಥಾದಲ್ಲಿ ಮಾತನಾಡಿ, ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಅರ್ಹ ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ಸರ್ವರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನ ಮಾಡಬೇಕು. ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಸಂವಿಧಾನ ನಮಗೆ ನೀಡಿದ ಹಕ್ಕನ್ನು ಬಳಸಬೇಕು ಎಂದು ತಿಳಿಸಿದರು.
ಮತದಾನದ ಪ್ರಮಾಣವಚನ ಸ್ವೀಕರಿಸಿ, ವಸ್ತ್ರದ ಮೇಲೆ ಸಹಿ ಸಂಗ್ರಹಿಸಿ ರಾಜ್ಯ ಚುನಾವಣಾ ಅಧಿಕಾರಿಗಳಾದ ಪಿ.ವಸ್ತ್ರದ್ ಅವರಿಗೆ ನೀಡಲಾಯಿತು.
ತಹಸೀಲ್ದಾರ್ ಗೌರಮ್ಮ, ನರೇಗಾ ಸಹಾಯಕ ನಿರ್ದೇಶಕ ಸುದೀಪ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net