ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ಅಧ್ಯಯನ

25 msk 03
ಮಸ್ಕಿ ದೈವದ ಕಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತುರ್ತು ಪರಸ್ಥಿತಿ ಕರಾಳ ದಿನಾಚರಣೆ ಕಾರ್ಯಕ್ರಮ ನಡೆಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಪ್ರಮುಖರಾದ ಮಲ್ಲಪ್ಪ ಅಂಕುಶದೊಡ್ಡಿ, ಅಪ್ಪಾಜಿಗೌಡ ಪಾಟೀಲ, ಡಾ.ಬಿ.ಎಚ್.ದಿವಟರ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಇತರರು ಇದ್ದರು.
Published on

ಮಸ್ಕಿ: ಐವತ್ತು ವರ್ಷಗಳ ಹಿಂದೆ ಇಂದಿರಾ ಗಾಂಧಿ ತುರ್ತು ಪರಸ್ಥಿತಿ ಹೇರಿ ಭಯಾನಕ ವಾತಾವರಣ ನಿರ್ಮಾಣ ಮಾಡಿದ್ದರು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಪಟ್ಟಣದ ದೈವದ ಕಟ್ಟೆ ಬಳಿ ಬಿಜೆಪಿಯಿಂದ ಬುಧವಾರ ಆಯೋಜಿಸಿದ್ದ ತುರ್ತು ಪರಸ್ಥಿತಿ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುರ್ತು ಪರಸ್ಥಿತಿ ಹೇರಿಕೆ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ಅಧ್ಯಯನವಾಗಿದೆ. ಸಂವಿಧಾನದ 19ನೇ ವಿಧಿಯನ್ನು ಅಮಾನತಿನಲ್ಲಿಡುವ ಮೂಲಕ ಸಂವಿಧಾನಬದ್ಧವಾಗಿ ಪ್ರಜೆಗಳು ಹೊಂದಿರುವ ಹಕ್ಕುಗಳನ್ನು ಮೊಟಕು ಗೊಳಿಸಿ ಅಧಿಕಾರ ಚಲಾಯಿಸಿದರು ಎಂದರು.

ಪ್ರಮುಖರಾದ ಶಿವಶಂಕರಪ್ಪ ಹಳ್ಳಿ, ದೊಡ್ಡಪ್ಪ ಬುಳ್ಳಾ, ಪಂಪಣ್ಣ ಗುಂಡಳ್ಳಿ, ಸುಗಣ್ಣ ಬಾಳೆಕಾಯಿ, ವೆಂಕಟೇಶ ಜಿ, ಸಿದ್ದಣ್ಣ ಮುಳ್ಳೂರು, ಅಶೋಕ ಠಾಕೂರ, ಚೇತನ ಪಾಟೀಲ, ಮೌನೇಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net