

ಎನ್.ಆರ್.ಪುರ: ಕಡೂರಿನ ವಕೀಲರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ತರೀಕೆರೆ ಉಪವಿಭಾಗಾಧಿಕಾರಿ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ತಹಸೀಲಾರ್ ತನುಜಾ ಟಿ.ಸವದತ್ತಿಗೆ ಮನವಿ ಸಲ್ಲಿಸಿದರು.
ಜ.22 ರಂದು ಕಡೂರಿನ ವಕೀಲ ಹರೀಶ ತರೀಕೆರೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣದ ಬಗ್ಗೆ ಹೈಕೋಟ್ ನೀಡಿದ ತಡೆಯಾಜ್ಞೆ ಆದೇಶದ ಬಗ್ಗೆ ತಿಳಿಸುವ ವೇಳೆ ಉಪ ವಿಭಾಗಾಧಿಕಾರಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಜತೆಗೆ ತರೀಕೆರೆ ಪೊಲೀಸ್ ಸಬ್ ಇಸ್‌ಸ್ಪೆಕ್ಟರ್ ಅವರನ್ನು ಕಚೇರಿಗೆ ಕರೆಸಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರ ದುರುಪಯೋಗಪಡಿಸಿ ಕೊಂಡಿದ್ದಾರೆ ಎಂದು ದೂರಿದರು.
ಈ ವಿಚಾರ ತಿಳಿದು ತರೀಕೆರೆ ವಕೀಲರ ಸಂಘದ ಸದಸ್ಯರು ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋದಾಗ ಪೊಲೀಸರನ್ನು ಕರೆಸಿ ಕಡೂರಿನ ವಕೀಲರನ್ನು ಅವರ ವಶದಲ್ಲಿಟ್ಟುಕೊಳ್ಳುವಂತೆ ಹೇಳಿದ್ದಾರೆ. ಆದ್ದರಿಂದ ತರೀಕೆರೆ ಉಪವಿಭಾಗಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು, ಕಾರ್ಯದರ್ಶಿ ಎಂ.ಆರ್.ಶಿವಪ್ರಸಾದ್, ಉಪಾಧ್ಯಕ್ಷ ಕೆ.ಜಯಪ್ರಕಾಶ್, ಖಜಾಂಚಿ ಎಚ್.ಎಂ.ಬಸವರಾಜು, ಸಹ ಕಾರ್ಯದರ್ಶಿ ಕೆ.ಎಸ್.ಕಾರ್ತಿಕೇಯನ್, ವಕೀಲರಾದ ಎಸ್.ಎಸ್.ಸಂತೋಚ್ ಕುಮಾರ್, ಚಂದ್ರಶೇಖರ್, ವಿದ್ವತ್, ಪೌಲ್‌ಚೆರಿಯನ್ ಇದ್ದರು.