

ವಿಜಯಪುರ: ಕ್ವಿಂಟಾಲ್ ತೊಗರಿ ಬೆಳೆಗೆ ರೂ.12 ಸಾವಿರ ರೂಪಾಯಿ ಇದ್ದ ದರವನ್ನು ಏಕಾಏಕಿ 7550ರೂ.ಗೆ ಕಡಿಮೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆಗ್ರಹಿಸಿದರು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಸೋಮವಾರ ತೊಗರಿ ನೆಲಕ್ಕೆ ಸುರಿದು ಪ್ರತಿಭಟಿಸಿದ ರೈತರು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನಲ್ಲಿ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೊಗರಿ ಬೆಳೆ ಹಾನಿಯಾಗಿದೆ. ಈಗಾಗಲೇ ಬೆಂಬಲ ಬೆಲೆಗೆ ತೊಗರಿ ಬೆಳೆ ಖರೀದಿಗೆ ಸರ್ಕಾರ ಆದೇಶಿಸಿದೆ. ಆದರೆ, ಬೆಂಬಲ ಬೆಲೆಯನ್ನು ರೂ.12 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಮತ್ತು ವರ್ಷಪೂರ್ತಿ ಖರೀದಿ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮುಖಂಡರಾದ ಸಂಗಮೇಶ ಸಗರ, ಪಾಂಡು ಹ್ಯಾಟಿ, ಬಾಲಪ್ಪಗೌಡ ಲಿಂಗದಳ್ಳಿ, ಈರಣ್ಣ ದೇವರಗುಡಿ, ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ವೀರಣ್ಣ ಸಜ್ಜನ, ಜಕರಾಯ ಪೂಜಾರಿ, ಗಿರಿಮಲ್ಲಪ್ಪ ದೊಡಮನಿ, ನಾಗಪ್ಪ ಬೂದಗೋಲಿ, ಶಿವಪ್ಪ ಸುಯ್ಯಳ, ರಾಜೇಸಾ ವಾಲಿಕಾರ, ಹಣಮಂತ ಮುರಾಳ, ಬಸಯ್ಯ ಮಠ, ಲಾಲಸಾಬ ಹಳ್ಳೂರ, ಶ್ರೀನಿವಾಸ ಗೊಟಗುಣಕಿ, ಪ್ರಭುಗೌಡ ಬಿರಾದಾರ, ಬಂದಗಿಸಾಬ ಹಳ್ಳೂರ, ಶೇಖು ಮುರಡಿ, ರಮೇಶ ಹಂದ್ರಾಳ, ಬಸು ಬಡಗೇರ, ಹಣಮೇಶ ಹಂದ್ರಾಳ, ಭೀಮಣ್ಣ ಮಾದರ, ಆಸೀಫ ಹಳ್ಳೂರ, ಆಕಾಶ ಬಿರಾದಾರ, ಮಹದೇವಪ್ಪ ಬಿರಾದಾರ, ಸಾಹೇಬಗೌಡ ಪಾಟೀಲ, ಬಾಬು ಹಡಪದ ಮತ್ತಿತರರಿದ್ದರು.