

ಹಿರೇಕೆರೂರ: ತಾಲೂಕಿನ ದೂದಿಹಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಸಾವಿಗೆ ನ್ಯಾಯ ಒದಗಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿನ ಭ್ರಷ್ಟಾಚಾರ ಖಂಡಿಸಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಸರ್ವಜ್ಞ ವೃತದಿಂದ ತಹಸೀಲ್ದಾರ್ ಕಚೇರಿವರೆಗೆ ಸೋಮವಾರ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಿದ್ಯಾರ್ಥಿನಿ ಅರ್ಚನಾ ಸಾವಿನ ಹಿಂದೆ ಸಾಕಷ್ಟು ಅನುಮಾನ ಮೂಡಿದೆ. ಈ ಬಗ್ಗೆ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ರಾಜ್ಯದಲ್ಲಿ ಭಾರಿ ಭ್ರಷ್ಟಾಚಾರ, ಕೊಲೆ, ದರೋಡೆ, ಹಗಲು ಲೂಟಿ ನಡೆಯುತ್ತಿದ್ದು, ಜನರು ರೋಸಿ ಹೋಗುತ್ತಿದ್ದಾರೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹೊಡೆದ ಶಾಸಕರು, ಸಚಿವರು, ಅಧಿಕಾರಿಗಳನ್ನು ಕೂಡಲೆ ವಜಾಗೊಳಿಸಬೇಕು. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಹೆಸರು ಕೇಳಿಬಂದಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಎಚ್. ಪ್ರಭಾಕಗೌಡ ಅವರ ಮೂಲಕ ರಾಜ್ಯಪಾಲರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ, ಬಿಜೆಪಿ ಎಸ್‌ಟಿ ಮೋರ್ಚಾ ತಾಲೂಕು ಅಧ್ಯಕ್ಷ ಚನ್ನೇಶ ದೇವಗಿಹಳ್ಳಿ, ನಿಂಗಾಚಾರ್ ಮಾಯಾಚಾರಿ, ಪಪಂ ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ಹರೀಶ ಕಲಾಲ್, ಹನುಮಂತಪ್ಪ ಕುರುಬರ, ರಮೇಶ ತೋರಣಗಟ್ಟಿ, ಚನ್ನಬಸಪ್ಪ ಮಾಳಗಿ, ಸತೀಶ ಕೋರಿಗೌಡ್ರ, ರಾಜು ಹೊಸಕಟ್ಟಿ, ಸಂತೋಷ ಎಲ್ಲಾಪುರ, ಹರೀಶ ಮಾಳಗಿ, ಸಂಜೀವಯ್ಯ ಕಬ್ಬಿಣಕಂತಿಮಠ, ಹೊನ್ನಪ್ಪ ಸಾಲಿ, ಉಮೇಶ ಬಣಕಾರ, ಜಯಣ್ಣ ಕಾಲ್ವಿಹಳ್ಳಿ, ಎನ್.ಎಸ್. ಚಿಕ್ಕನರಗುಂದಮಠ, ವಿ.ಬಿ. ಚಿಟ್ಟೂರ, ಎಚ್.ಬಿ. ಹನುಮಗೌಡ್ರ, ರುದ್ರೇಶ ಕೋಣನವರ, ಜಗದೀಶ ದೊಡ್ಡಗೌಡ್ರ, ಸುಪ್ರೀತ ಧಾರವಾಡಕರ್, ಹುಚ್ಚನಗೌಡ ಕಬ್ಬಕ್ಕಿ, ಬಸವರಾಜ ಚಿಂದಿ, ಶಂಕರನಾಯಕ್ ಲಮಾಣಿ, ಹುಚ್ಚಣ್ಣ ಚೌಟಗಿ, ಗಿರೀಶ ಪಾಟೀಲ, ಪ್ರದೀಪ ಪಾಟೀಲ, ಚಂದ್ರು ಸುಣಗಾರ, ಮುತ್ತಣ್ಣ ನೇಸ್ವಿ, ಎಸ್.ಎಚ್. ಬಣಕಾರ, ಗಂಗಾಧರ ಮಾಗನೂರ, ಗಂಗಾಧರ ಬಡಲಿಂಗಪ್ಪನವರ, ವೀರಣ್ಣ ಚಿಟ್ಟೂರ ಇದ್ದರು.