

ಚಿತ್ರದುರ್ಗ: ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ‌್ಯಕರ್ತರು ಮಂಗಳವಾರ ನಗರ ಸಭೆ ಬಳಿ ಪ್ರತಿಭಟಿಸಿದರು.
ನಗರದಲ್ಲಿ ಅಳವಡಿಸಿರುವ ಕ್ಯಾಮರಾಗಳು ಬಹುತೇಕ ಕೆಟ್ಟು ಹೋಗಿವೆ. ಸರಗಳ್ಳತನ ಜಾಸ್ತಿಯಾಗುತ್ತಿದೆ. ಮನೆಯಿಂದ ಕಸ ತಂದು ಬೀದಿಗೆ ಸುರಿಯುವವರು ಹೆಚ್ಚಾಗಿದ್ದಾರೆ. ಅನೇಕ ಕಡೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರೂ ಸಿ.ಸಿ.ಕ್ಯಾಮರಾಗಳಿಲ್ಲದೆ ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.
ಆದ್ದರಿಂದ ಶಾಲಾ-ಕಾಲೇಜು,ಆಸ್ಪತ್ರೆ,ಬಸ್‌ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸು ವಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿ ಪೌರಾಯುಕ್ತ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಿದರು. ವೀಣಾಗೌರಣ್ಣ, ಗೋಪಿನಾಥ್,ಮುಜಾಹಿದ್,ಸಿ.ಆರ್.ಹರಿಶ್‌ಕುಮಾರ್,ವಿ.ಜಗದೀಶ್,ಅಖಿಲೇಶ್,ವಿಜಯಬಾಬು, ಅವಿನಾಶ್ ಇತರರು ಇದ್ದರು.