

ಕಲಕೇರಿ: ಸಮೀಪದ ಕೆರುಟಗಿ ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ರಾಜ್ಯ ದಲಿತ ಸಂರ್ಷ ಸಮಿತಿ ತಾಲೂಕು ಶಾಖೆ ಹಾಗೂ ಕಲಕೇರಿ ವಲಯ ಶಾಖೆ ಸಂಯುಕ್ತ ಆಶ್ರಯದಲ್ಲಿ ಕೆರುಟಗಿ ಗ್ರಾಮದಲ್ಲಿ ಸಿಂದಗಿ&ಕಲಕೇರಿ ಮುಖ್ಯರಸ್ತೆ ಬಂದ್ ಮಾಡಿ ಸೋಮವಾರ ಪ್ರತಿಭಟನೆ ಮಾಡಲಾಯಿತು.
ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸ್ಥಳಿಯ ಆಡಳಿತ ಹಾಗೂ ತಾಲೂಕು ಆಡಳಿತ ಸಂಪೂರ್ಣವಾಗಿ ವಿಲವಾಗಿದೆ. ರಾಜ್ಯ ಸರ್ಕಾರ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯೋಜನೆಗಳನ್ನು ರೂಪಿಸಿದೆ. ವಿಶೇಷ ಅನುದಾನ ಮಂಜೂರಾತಿ ಇದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಕೊಡಗಳನ್ನು ಇಟ್ಟುಕೊಂಡು ಮಹಿಳೆಯರು ಹಾಗೂ ಗ್ರಾಮಸ್ಥರು ಅಂದಾಜು ಮೂರು ಗಂಟೆ ಸಿಂದಗಿ & ಕಲಕೇರಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಸುಡು ಬಿಸಿಲನ್ನು ಲೆಕ್ಕಿಸದೆ ರಸ್ತೆ ರೋಕೋ ಚಳವಳಿ ಹಾಗೂ ಬೃಹತ್ ಪ್ರತಿಭಟನೆ ಮಾಡಿದರು. ಜೀವ ತಗೊಳ್ಳಿ, ಇಲ್ಲ ನೀರು ಕೊಡಿ ಎಂದು ಆಗ್ರಹಿಸಿದ ಗ್ರಾಮಸ್ಥರು ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಟಿ.ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ಭೂಗೋಳ ಶಾಸಜ್ಞ ಬಸವರಾಜ ಚಿಕ್ಕಸಂಶಿ ಅವರು ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿಗಾಗಿ ಬೋರ್ವೆಲ್ ಪಾಯಿಂಟ್ಗಾಗಿ ಸ್ಥಳ ಪರಿಶೀಲನೆ ಮಾಡಿದರು.
ತಾಪಂ ಮಾಜಿ ಸದಸ್ಯ ಲಕ್ಕಪ್ಪ ಬಡಿಗೇರ, ಪರಸುರಾಮ ಬಡಿಗೇರ, ಶಿವಾನಂದ ವಾಲಿಕಾರ, ಅಶೋಕ ಗುಡಿಸಲಮನಿ, ರಾಮನಗೌಡ ಚಟ್ಟರಕಿ, ಸಿದ್ರಾಮಪ್ಪ ಮಾದರ, ಪರಸುರಾಮ ದೊಡಮನಿ, ಬಾಬು ಮೇಲಿನಮನಿ, ಬಾಬು ರಾಠೋಡ, ಚಂದ್ರು ಬಡಿಗೇರ, ಮುತ್ತು ಅಂಬಳನೂರ, ಪ್ರಕಾಶ ಪಡಶೆಟ್ಟಿ ಇತರರಿದ್ದರು.