ತೆರವು ಕಾರ್ಯ ಸ್ಥಗಿತಗೊಳಿಸಲು ಆಗ್ರಹ

17Savadatti1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;
Published on

ಸವದತ್ತಿ: ಯಾವುದೇ ನೋಟಿಸ್ ನೀಡದೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಹುವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ನಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ವ್ಯಾಪಾರಸ್ಥರು ಪಟ್ಟಣದ ಪುರಸಭೆ ಎದುರು ಸೋಮವಾರ ಪ್ರತಿಭಟಿಸಿದರು.

ಮುಖಂಡ ಅಮೀರ್ ಗೊರೇನಾಯ್ಕ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಬಡ ವ್ಯಾಪಾರಸ್ಥರಿಗೆ ತೊಂದರೆ ನೀಡಲಾಗುತ್ತಿದೆ. ವ್ಯಾಪಾರಸ್ಥರು ಆತಂಕಗೊಂಡಿದ್ದಾರೆ. ಕೂಡಲೇ ಅವರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಸಿಟಿ ಸರ್ವೇ ಆಧಾರದ ಮೇಲೆ ಪಟ್ಟಣದ ಎಲ್ಲ ರಸ್ತೆಗಳ ಸರ್ವೇ ಮಾಡಿ ರಸ್ತೆ ಅಗಲೀಕರಣ ಕಾರ್ಯ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ರಸ್ತೆ ಮತ್ತು ುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಮಾ.20ರ ವರೆಗೆ ಕಾಲಾವಕಾಶ ನೀಡಿದ್ದು, ಯಾವುದೇ ಸ್ವಂತ ಕಟ್ಟಡ ತೆರವುಗೊಳಿಸುತ್ತಿಲ್ಲ. ಪಟ್ಟಣದ ಸೌಂದರ್ಯ ಹೆಚ್ಚಿಸುವ 3 ಕೋಟಿ ರೂ.ವೆಚ್ಚದ ಅಲಂಕಾರಿಕ ದೀಪಗಳ ಅಳವಡಿಕೆ ಕಾರ್ಯದ ಹಿನ್ನೆಲೆಯಲ್ಲಿ ಒತ್ತುವರಿ ತೆರುವುಗೊಳಿಸಲಾಗುತ್ತಿದೆ.

ುಟ್‌ಪಾತ್ ನಿರ್ಮಾಣದಿಂದ ಜನರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ವ್ಯಾಪಾರಸ್ಥರು ಸಹಕರಿಸಬೇಕು ಎಂದರು. ಸಂಗಮೇಶ ಕಳ್ಳಿಮನಿ, ಬಸು ಸುಣಗಾರ, ಕ್ರುಸಾಬ್ ದೊಡ್ಡಮನಿ, ಯುಸೂಪ್ ಎಲಿಗಾರ, ಸದಾನಂದ ಶೆಟ್ಟರ್, ಬೋರೆಸಾಬ್ ಸಣ್ಣಕ್ಕಿ, ರವಿ ಕುರಿ, ಸುಧಾಕರ ಶೆಟ್ಟಿ, ಈಶ್ವರ ಶೆಟ್ಟಿ, ಾರೂಕ್ ಯರಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net