

ವಿಜಯಪುರ : ಪಟ್ಟಣದ ಸರ್ವೇ ನಂ.28/3 ರಲ್ಲಿ ಒಂದೂವರೆ ವರ್ಷಗಳ ಹಿಂದೆ ಪುರಸಭೆಯಿಂದ ಆರಂಭಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಟಕ (ಎಸ್ಟಿಪಿ) ನಿರ್ಮಾಣ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಿ, ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಸ್ಥಳಿಯರು ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ರೈತರು ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಲ್ಪ ದೂರದಲ್ಲಿ ಅಪಾರ್ಟ್ಮೆಂಟ್, ಲೇಔಟ್ಗಳು ನಿರ್ಮಾಣಗೊಂಡಿದೆ. ರೇಷ್ಮೆ ಸಾಕಾಣಿಕೆ ಮನೆಗಳಿವೆ. ಇಂತಹ ಜಾಗದಲ್ಲಿ ಎಸ್ಟಿಪಿ ಟಕ ಆರಂಭಗೊಂಡರೆ ರೈತರು ಹಾಗೂ ಸ್ಥಳಿಯ ನಿವಾಸಿಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಎಸ್ಟಿಪಿ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದರು.
ಎಸ್ಟಿಪಿ ಕಾಮಗಾರಿ ಸ್ಥಳಾಂತರಿಸುವಂತೆ ಕೋರಿ ಜನವರಿಯಲ್ಲಿ ರೈತರು, ಸ್ಥಳಿಯರಿಂದ ಪುರಸಭೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೆ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಈ ಕಾಮಗಾರಿಯ ಬಗ್ಗೆ ಪುರಸಭೆ ಸ್ಥಳಿಯರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಪುರಸಭೆ ಅಧ್ಯೆ ಭವ್ಯಾ ಮಹೇಶ್ ಮಾತನಾಡಿ, ಇಲ್ಲಿನ ಜನರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಸ್ಥಳಿಯ ನಿವಾಸಿಗಳಿಗೆ ಭರವಸೆ ನೀಡಿದರು.
ಸರ್ವೇ ನಂ.28/3 ರ 2.36 ಗುಂಟೆ ಜಮೀನಿನಲ್ಲಿ ಪುರಸಭೆ ಅಕ್ರಮವಾಗಿ ಎಸ್ಟಿಪಿ ಟಕ ಸೇರಿ ಇತರೆ ಕಟ್ಟಡ ನಿರ್ಮಿಸುತ್ತಿದ್ದಾರೆ. ಪುರಸಭೆಗೆ ಜಾಗ ನೀಡಿರುವುದಿಲ್ಲ ಎಂದು ಜಮೀನು ಮಾಲೀಕ ಮುನಾಪೀರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇಲ್ಲಿಯವರೆಗೆ ಅವರಿಗೆ ಸರ್ಕಾರದಿಂದ ಪರಿಹಾರ ನೀಡಿಲ್ಲ. ಆದರೆ ಪುರಸಭೆ ಜಿದ್ದಿಗೆ ಬಿದ್ದಂತೆ ಇಲ್ಲಿ ಕಾಮಗಾರಿ ನಡೆಸಲು ಮುಂದಾಗಿದೆ ಎಂದು ಆರೋಪಿಸಿದರು. > ಕಾರ್ತಿಕ್ ಸ್ಥಳಿಯ ನಿವಾಸಿ ಜನಸಂದಣಿ ಇರುವ ಸ್ಥಳದಲ್ಲಿ ಎಸ್ಟಿಪಿ ಟಕ ಆರಂಭಗೊಂಡರೆ ಸ್ಥಳಿಯರಿಗೆ ಹೆಚ್ಚು ಸಮಸ್ಯೆಯಾಗಲಿದೆ. ನಾವು ರೇಷ್ಮೆ ಬೆಳೆಯುತ್ತೇವೆ. ಇದಕ್ಕೆ ತೊಂದರೆಯಾಗಲಿದೆ. ಸ್ಥಳಿಯವಾಗಿರುವ ನ್ಯೂಟೌನ್ ವಿಜಯಪುರ, ಮಿತ್ತನಹಳ್ಳಿ, ಯಲುವಹಳ್ಳಿ, ಹಾರ್ಡಿಪುರದ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ. > ಕಾಮಾ ರೈತ ಮಹಿಳೆ