

ಬೆಳಗಾವಿ: ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಅಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಪ್ರತಿಭಟನೆ ನಡೆಸಿ ಕೆಎಸ್‌ಆರ್ ಟಿಸಿ ಡಿಸಿಗೆ ಮನವಿ ಸಲ್ಲಿಸಿದರು.
ಭಾಷಾ ವಿವಾದ ಇರುವುದು ಎಂಇಎಸ್ ಹಾಗೂ ಶಿವಸೇನೆಯ ನಡುವೆ. ಇದರಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಬಾರದು. ಕೂಡಲೇ ಬಸ್ ಸೇವೆ ಆರಂಭಿಸಿ ಎಂದು ಮನವಿ ಸಲ್ಲಿಸಿದರು. ಕರ್ನಾಟಕ ಸರ್ಕಾರದ ಬಸ್ ಗಳಿಗೆ ಮಸಿ ಬಳಿಯುತ್ತಿರುವ ಪುಂಡ ಶಿವಸೇನೆಯ ನಾಯಕರು ತಾಕತ್ತಿದ್ದರೆ ನೇರಾನೇರ ಬರಬೇಕು. ಇಂತಹ ಪುಂಡಾಟಿಕೆಗೆ ಕನ್ನಡಿಗರು ಬಗ್ಗಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಾಜೀದ್ ಹಿರೇಕೋಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.