ಆದಿವಾಸಿಗಳ ಸಮಸ್ಯೆ ಪರಿಹರಿಸಲು ಒತ್ತಾಯ

27Hun 2 3
ವಿಠಲ್ ನಾಣಾಚ್ಚಿ
Published on

ಹುಣಸೂರು: ನಾಲ್ಕು ದಶಕಗಳಿಂದ ಆದಿವಾಸಿಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 6ಕ್ಕೂ ಹೆಚ್ಚು ಪ್ರಶ್ನೆಗಳ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಬೆಟ್ಟಕುರುಬ ಪಾರಂಪರಿಕ ಸಂಘ ಹಾಗೂ ಡೀಡ್ ಸಂಸ್ಥೆ ಮಾಹಿತಿ ನೀಡಿದೆ.

ಶನಿವಾರ ಪಿರಿಯಾಪಟ್ಟಣ ತಾಲೂಕಿಗೆ ಮುಖ್ಯಮಂತ್ರಿ ಭೇಟಿ ನೀಡಿದ್ದ ವೇಳೆ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಮತ್ತು ಡೀಡ್ ಸಂಸ್ಥೆ ಸಹಯೋಗದಲ್ಲಿ ಆದಿವಾಸಿಗಳ ಸಮಸ್ಯೆಗಳನ್ನೊಳಗೊಂಡ 6ಕ್ಕ್ಕೂ ಹೆಚ್ಚು ಪ್ರಮುಖ ಪ್ರಶ್ನೆಗಳನ್ನು ಕೇಳಿ ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.

ಕಾಡಿನಿಂದ ಆದಿವಾಸಿಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೆಸರಲ್ಲಿ ಹೊರಹಾಕಿ ನಿರ್ಗತಿಕರನ್ನಾಗಿಸಿರುವ ಅನ್ಯಾಯ ಸರಿಪಡಿಸಲೆಂದೆ ಜಾರಿಗೆ ತಂದಿರುವ ಅರಣ್ಯ ಹಕ್ಕಿನ ಮಾನ್ಯತಾ ಕಾಯ್ದೆ ಸರಿಯಾಗಿ ಅನುಷ್ಠಾನಗೊಳಿಸಬೇಕು, ಹುಣಸೂರಿನ ಆದಿವಾಸಿಗಳು ಸಲ್ಲಿಸಿದ 1,300 ಅರಣ್ಯ ಭೂಮಿ ಹಕ್ಕು ಪ್ರಸ್ತಾವನೆಗಳನ್ನು ತಿರಸ್ಕರಿಸಿ ಹಕ್ಕು ಕಸಿಯಲಾಗಿದೆ. ಇದನ್ನು ಸರಿಪಡಿಸಬೇಕು. ಪ್ರೊ.ಮುಜಾಫರ್ ಅಸಾದಿ ನೇತೃತ್ವದ ವರದಿ ಹಾಗೂ ಕೋರ್ಟ್ ಸಮಿತಿ ಶಿಫಾರಸಿನಂತೆ 3,418 ಕುಟುಂಬಗಳಿಗೆ ತಲಾ 5 ಎಕರೆ ಭೂಮಿ ನೀಡಿ ಪುನರ್ವಸತಿ ನೀಡುವಂತೆ ಆಗ್ರಹಿಸಲಾಗಿದೆ. ಅಲ್ಲದೆ ಕೃಷಿ ಭೂಮಿ ಹೊಂದಿ, ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಪಕ್ಕಪೋಡು ಮಾಡಿ ಅಂತಿಮ ದಾಖಲೆ ನೀಡುವಂತೆ ಮನವಿ ಮಡಲಾಗಿದೆ ಎಂದು ಬೆಟ್ಟಕುರುಬ ಪಾರಂಪರಿಕ ಸಂಘ ಮಾಜಿ ಅಧ್ಯಕ್ಷ ವಿಠಲ್ ನಾಣಾಚ್ಚಿ, ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ತೆಕ್ಕಲಹಾಡಿಯ ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net