ಹಿರಿಯರಿಗೆ ವಿಶ್ರಾಂತಿ ಗೃಹ ಮರಳಿಸಲು ಆಗ್ರಹ

New Project (47)
Published on

ಬದಿಯಡ್ಕ: ಹಿರಿಯ ನಾಗರಿಕರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರೂ ಅದು ಅವರಿಗೆ ಸರಿಯಾಗಿ ಲಭಿಸದೆ ಇರುವುದು ಖೇದಕರ. ಬದಿಯಡ್ಕದದಲ್ಲಿ ಹಗಲು ವಿಶ್ರಾಂತಿ ಗೃಹವನ್ನು ಹಿರಿಯರಿಗೆ ನೀಡದೆ ಅವರನ್ನು ವಂಚಿಸಲಾಗಿದೆ. ಹಿರಿಯರ ಹಿತದೃಷ್ಟಿಯಿಂದ ಕೂಡಲೇ ವಿಶ್ರಾಂತಿ ಗೃಹವನ್ನು ಅವರಿಗೆ ಹಿಂತಿರುಗಿಸಬೇಕೆಂದು ಖ್ಯಾತ ಉದ್ಯಮಿ ಬಲಿಪಗುಳಿ ರಾಜಾರಾಮ ಆಗ್ರಹಿಸಿದರು.

ಬದಿಯಡ್ಕ ಸಮೀಪದ ಪೆರ್ಮುಖ ಡಾ.ನಾರಾಯಣ ಪ್ರದೀಪ ಅವರ ನಿವಾಸದಲ್ಲಿ ಜರುಗಿದ ಪೆರಡಾಲ ನವಜೀವನ ಹೈಸ್ಕೂಲಿನ 1962 ಮತ್ತು 1968 ತಂಡದ ಹಳೇ ವಿದ್ಯಾರ್ಥಿಗಳ ಸಂಗಮ ಉದ್ಘಾಟಿಸಿ ಮಾತನಾಡಿದರು.

ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಮಾಜಿ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಮಾತನಾಡಿ, ಬದಿಯಡ್ಕದ ಹಿರಿಯ ನಾಗರಿಕರ ಹಗಲು ವಿಶ್ರಾಂತಿ ಗೃಹದಲ್ಲಿ ಹಿರಿಯರು ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದರು. ಇದೀಗ ಅದೇ ಮನೆಯಲ್ಲಿ ಹೋಮಿಯೋ ಆಸ್ಪತ್ರೆಯನ್ನು ತೆರೆದು ಹಿರಿಯರಿಗೆ ಸ್ಥಳವಿಲ್ಲದಂತಾಗಿದೆ ಎಂದರು.

ಕರ್ನಾಟಕದ ನಿವೃತ್ತ ಎಸ್.ಐ.ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಸಂಪತ್ತಿಲ ಶಂಕರ ನಾರಾಯಣ ಭಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net