ಬಸ್ ಸಂಚಾರ ಮರು ಆರಂಭಿಸಲು ಆಗ್ರಹ

Santeguli
Published on

ಕುಮಟಾ: ತಾಲೂಕಿನ ಸಂತೇಗುಳಿ ಸನಿಹದ ದೀವಳ್ಳಿ ಅಟ್ಲಗುಂಡಿ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದಾಗಿ ಬಸ್ ವ್ಯವಸ್ಥೆಯೂ ಬಂದ್ ಆಗಿದ್ದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವನಿಕರಿಗೆ ಸಮಸ್ಯೆಯಾಗಿದೆ.

ಬಸ್ ನಂಬಿರುವ ಸಾರ್ವನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸುತ್ತಮುತ್ತಲ ಪಂಚಾಯಿತಿಗಳ ಸಾರ್ವಜನಿಕರು ಜು. 25ರಂದು ದೀವಳ್ಳಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಸೇತುವೆಯ ಒಂದು ಪಕ್ಕದಲ್ಲಿ ಮಾತ್ರ ಕಂಬದ ಕಲ್ಲುಗಳು ಕುಸಿದಿದ್ದರಿಂದ ಅಲ್ಲಿ ತಾತ್ಕಾಲಿಕವಾಗಿ ಬಲವಾದ ಕಬ್ಬಿಣದ ಚೌಕಟ್ಟುಗಳನ್ನು ಹಾಕಿ ಪಿಡಬ್ಲ್ಯುಡಿಯವರು ಆಧಾರ ನೀಡಿದ್ದಾರೆ. ಹೀಗಾಗಿ ಇದೇ ಸೇತುವೆಯ ಮೇಲೆ ಭಾರಿ ವಾಹನ ಸಂಚಾರವನ್ನು ಮಾತ್ರ ನಿಷೇಧಿಸಲಾಗಿದೆ. ಆದರೆ ಸಾರಿಗೆ ಬಸ್ ಸಂಚಾರವೂ ನಾಲ್ಕು ದಿನದಿಂದ ಬಂದ್ ಆಗಿರುವುದು ತೀವ್ರ ಸಮಸ್ಯೆ ಸೃಷ್ಟಿಸಿದೆ.

ಸಂತೆಗುಳಿ, ಸೊಪ್ಪಿನಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಿಂದ ನೂರಾರು ಜನ, ಶಾಲಾ ಕಾಲೇಜು ವಿದ್ಯಾರ್ಥಿಗಳು ಕುಮಟಾಕ್ಕೆ ಬರಲಾಗದೇ ಪರದಾಡುವಂತಾಗಿದೆ. ಹಾಗೆಯೇ ಚಂದಾವರ, ಹೊಸಾಡು, ಹಟ್ಟಿಕೇರಿ, ಮರಾಕಲ್, ಸಾಂತಗಲ್ ಇನ್ನಿತರ ಪ್ರದೇಶಗಳಿಂದ ಸಂತೆಗುಳಿಯಲ್ಲಿರುವ ಕೆಪಿಎಸ್ ಹಾಗೂ ಇತರ ಶಾಲೆಗಳಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೂ ತೊಂದರೆಯಾಗಿದೆ. ಆದ್ದರಿಂದ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net