

ಕಡಬ: ಕಡಬ ತಾಲೂಕಿನ ಸವಣೂರು-ಬಂಬಿಲ-ಅಂಕತಡ್ಕ ರಸ್ತೆಯ ನಾಡೋಳಿ ಎಂಬಲ್ಲಿ ಮಳೆಗೆ ನಿರಂತರವಾಗಿ ದರೆ ಕುಸಿಯುತ್ತಿದ್ದು ಆತಂಕ ಹೆಚ್ಚಿದೆ. ಈ ರಸ್ತೆಯಲ್ಲಿ ಮಳೆ ಕಡಿಮೆಯಾಗುವ ತನಕ ಸಂಚಾರ ನಿರ್ಬಂಧಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ನಾಡೋಳಿಯಲ್ಲಿ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ರಸ್ತೆ ಅಗಲೀಕರಣ ಹಾಗೂ ಸೇತುವೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ ಸಲುವಾಗಿ ಬೃಹತ್ ಬರೆಯನ್ನು ಅಗೆಯಲಾಗಿದ್ದು, ಈ ರಸ್ತೆಯ ಎರಡೂ ಬದಿಯ ಬರೆ ಈಗ ಮಳೆಗಾಲದಲ್ಲಿ ಕುಸಿಯುತ್ತಿದೆ. ಬರೆಯ ಮೇಲೆ ವಿದ್ಯುತ್ ಕಂಬ ಹಾದು ಹೋಗಿದ್ದು, ಅದು ಕೂಡ ಈಗ ಕುಸಿಯುವ ಹಂತಕ್ಕೆ ತಲುಪಿದೆ.
ಮಣ್ಣು ತೆರವುಗೊಳಿಸಿದಾಗ ಮತ್ತೆ ದರೆ ಕುಸಿತವಾಗುತ್ತಿದ್ದು, ಮಳೆ ಕಡಿಮೆಯಾಗುವ ತನಕ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.