ರೈತರ ವಿವಿಧ ಸಮಸ್ಯೆ ಬಗೆಹರಿಸುವಂತೆ ಒತ್ತಾಯ

03 HANUR 6
filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 44;
Published on

 ಹನೂರು: ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಿಗೆ ಮನವಿ ಮಾಡಿದರು.

ಸಂಘದ ರೈತರೊಂದಿಗೆ ಗುರುವಾರ ಆರ್.ಎಸ್. ದೊಡ್ಡಿ ಗ್ರಾಮದಲ್ಲಿ ಸಚಿವರನ್ನು ಭೇಟಿಯಾಗಿ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಿಬ್ಬಂದಿ ಗಸ್ತು ನಡೆಸದ ಕಾರಣ ಮಿಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಮೃತಪಟ್ಟಿವೆ. ಆದ್ದರಿಂದ ಕಡ್ಡಾಯ ರಜೆಯ ಹಿನ್ನಲೆ ತೆರಳಿರುವ ಸಂಬಂಧಪಟ್ಟ ಡಿಸಿಎಫ್, ಎಸಿಎಫ್ ಹಾಗೂ ಆರ್‌ಎಫ್‌ಒ ಅವರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ತನಿಖೆಯನ್ನು ಅರಣ್ಯ ಇಲಾಖೆಗೆ ನೀಡದೆ ಉನ್ನತ ಅಧಿಕಾರಿಗಳಿಗೆ ವಹಿಸಬೇಕು. ಇನ್ನು ಈ ಭಾಗದಲ್ಲಿ ಗೊಬ್ಬರವನ್ನು ತಮಿಳುನಾಡಿಗೆ ಮಾರಾಟ ಮಾಡುತ್ತಿರುವ ಆರೋಪ ಶುದ್ಧ ಸುಳ್ಳು. ಈ ಭಾಗದಲ್ಲಿ ಹಸುಗಳನ್ನು ಸಮೀಕ್ಷೆ ನಡೆಸುವಂತೆ ಹಲವು ವರ್ಷಗಳಿಂದಲೂ ಮನವಿ ಮಾಡಲಾಗುತ್ತಿದೆ. ಆದರೆ, ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸರ್ವೇಕಾರ್ಯ ನಡೆಸಿ ಜಾನುವಾರುಗಳನ್ನು ಹೊಂದಿರುವವರನ್ನು ಗುರುತಿಸಬೇಕು. ಒಂದು ವೇಳೆ ಇಲ್ಲಿ ತಮಿಳುನಾಡಿನ ಹಸುಗಳಿದ್ದರೆ ಅಲ್ಲಿಗೆ ಕಳುಹಿಸುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.

ಇನ್ನು ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಅರಿಸಿಣ, ಬಾಳೆ, ಕಬ್ಬು, ರಾಗಿ, ಶುಂಠಿ, ಹುಣಸೆ, ಮಾವು, ತೆಂಗು ಹಾಗೂ ಇನ್ನಿತರೆ ಪ್ರಮುಖ ಬೆಳೆಗಳಿಗೆ ಸಂಸ್ಕರಣ ಸಮೂಹವನ್ನು ಸ್ಥಾಪಿಸಬೇಕು. ಚಾಮರಾಜನಗರದಲ್ಲಿ ಆಧುನಿಕ ಗ್ರಾಮೀಣ ಆರ್ಥಿಕತೆಗಾಗಿ ಕೃಷಿ ಸ್ಮಾರ್ಟ್ ಸೌಕರ್ಯವಾಗಬೇಕು. ಹೋಬಳಿ ಮಟ್ಟದಲ್ಲಿ ಸಂಸ್ಕರಣ ಘಟಕಗಳು ಸ್ಥಾಪನೆಯಾಗಬೇಕು. ಚಾಮರಾಜನಗರವನ್ನು ವಿಶೇಷ ಕೃಷಿ ಮಾದರಿ ಜಿಲ್ಲೆಯಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.

ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಅವರು ಮಾತನಾಡಿ, ಚಂಗಡಿ ಗ್ರಾಮವನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಸಂಬಂಧ ಅನುಮೋದನೆ ದೊರೆತು ಮೂರುವರೆ ವರ್ಷ ಕಳೆದಿದೆ. ಆದರೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿದದೇವೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದರು.

ಸಚಿವರು ಈ ಎಲ್ಲ ಸಮಸ್ಯೆಗಳ ಸಂಬಂಧ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರಿಂದ ಮಾಹಿತಿ ಪಡೆದು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net