

ಕೊಕ್ಕರ್ಣೆ: ಹೊರ್ಲಾಳಿ ಪಡಿತರ ವಿತರಣಾ ಕೇಂದ್ರಕ್ಕೆ ಜಾಗ ನೀಡದೆ ಅತಿಕ್ರಮಣ ವಾಡಲಾಗಿದೆ. ಪಡಿತರ ವಿತರಣಾ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ, ಸಮುದಾಯ ಭವನ ಹಾಗೂ ಸ್ಮಶಾನಕ್ಕೆ ಸರ್ಕಾರಿ ಜಾಗ ಕಾಯ್ದಿರಿಸುವಂತೆ ಅಧಿಕಾರಿಗಳನ್ನು ಗ್ರಾಮಸ್ಥರು ಆಗ್ರಹಿಸಿದರು.
ಹೊರ್ಲಾಳಿಯ ಅತಿಕ್ರಮಣ ಜಾಗಕ್ಕೆ ಬುಧವಾರ ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕಂದಾಯ ಅಧಿಕಾರಿ ರಾಜು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಭೀಮ ರ್ಜನೆ ರಾಜ್ಯಾಧ್ಯಕ್ಷ ಡಾ.ಉದಯ್‌ಕುವಾರ್ ತಲ್ಲೂರ್ ಹಾಗೂ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ನೀಡಿ ಸರ್ಕಾರಿ ಜಾಗ ಕಾಯ್ದಿರಿಸಲು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್, ಎರಡು ಎಕರೆ ಜಾಗವನ್ನು ಕಾಯ್ದಿರಿಸುವುದಾಗಿ ಭರವಸೆ ನೀಡಿದರು.
ಭೀಮರ್ಜನೆ ಜಿಲ್ಲಾ ಸಂಟನೆ ಸಂಚಾಲಕ ಸುಧಾಕರ್ ಸೂರ್ಗೋಳಿ, ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಜಯಂತ್ ಪೂಜಾರಿ, ಉಡುಪಿ ನಗರ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಡಿ.ಶೆಟ್ಟಿ, ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ಹೊರ್ಲಾಳಿ, ಪ್ರಮುಖರಾದ ವಾಧವ ನಾಯ್ಕ ಹೊರ್ಲಾಳಿ, ಜಿಲ್ಲಾ ಸಂಟನಾ ಸಂಚಾಲಕ ರಾು ಶೀರೂರು, ಶಶಿ ಬಳ್ಕೂರು, ಕುಂದಾಪುರ ತಾಲೂಕು ಸಂಚಾಲಕ ಮಂಜುನಾಥ್ ಗುಡ್ಡೆಯಂಗಡಿ, ಬ್ರಹ್ಮಾವರ ತಾಲೂಕು ಸಂಟನಾ ಸಂಚಾಲಕ ಗೋಪಾಲ ಮಿಯ್ಯಾರು, ಶ್ರೀನಿವಾಸ ತೊನ್ನಾಸೆ, ಸಂದೀಪ ಸೂರ್ಗೋಳಿ ಮತ್ತು ಹೊರ್ಲಾಳಿ ಹಾಗೂ ಬಿಯಾಳಿ ಗ್ರಾಮಸ್ಥರು ಉಪಸ್ಥಿತರಿದ್ದರು.