ಕುರುಬರಹಳ್ಳಿ ಸಂಚಾರ ಠಾಣೆ ಹೆಸರಿಡಲು ಆಗ್ರಹ

Published on

ಮೈಸೂರು: ನಗರದ ಕುರುಬರಹಳ್ಳಿಯಲ್ಲಿರುವ ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆಯ ಹೆಸರನ್ನು ಕುರುಬರಹಳ್ಳಿ ಸಂಚಾರ ಪೊಲೀಸ್ ಠಾಣೆ ಎಂದು ಹೆಸರಿಡಲು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಕ್ರಾಂತಿವೀರ ಸಂಗೂಳ್ಳಿ ರಾಯಣ್ಣ ಯುವ ಘರ್ಜನೆಯಿಂದ ಸಂಗೂಳ್ಳಿ ರಾಯಣ್ಣ ವೃತ್ತದ ಬಳಿ ಶುಕ್ರವಾರ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಹಲವರು ಸಹಿ ಹಾಕಿದರು.

ಜಿಲ್ಲಾಧ್ಯಕ್ಷ ಪುನೀತ್ ರಾಯಣ್ಣ ಮಾತನಾಡಿ, ಕುರಬರಹಳ್ಳಿ ಸುತ್ತ ಮುತ್ತವಿರುವ ವಿವಿಧ ಬಡಾವಣೆಗಳು ಕೆಲವು ವರ್ಷಗಳ ಹಿಂದೆ ಉದ್ಬವವಾಗಿದೆ. ಆದರೆ ಕುರಬರಹಳ್ಳಿಗೆ ರಾಜರ ಕಾಲದಿಂದಲೂ ಇತಿಹಾಸವಿದ್ದು, ಪುರಾತನ ಗ್ರಾಮವಾಗಿದೆ. ಈ ಹಿನ್ನೆಲೆಯಲ್ಲಿ ಕುರಬರಹಳ್ಳಿ ಗ್ರಾಮದ ಮುಂಭಾಗವಿರುವ ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆಯ ಹೆಸರನ್ನು ಕುರುಬರಹಳ್ಳಿ ಸಂಚಾರ ಪೊಲೀಸ್ ಠಾಣೆ ಎಂದು ಬದಲಿಸಬೇಕು ಎಂದು ಆಗ್ರಹಿಸಿದರು.

ನಗರಪಾಲಿಕೆ ಮಾಜಿ ಸದಸ್ಯ ರಮೇಶ್, ಮುಖಂಡರಾದ ಪರಮೇಶ್, ಕೃಷ್ಣ, ಸಂಜಯ್, ಮಹದೇವ್, ಪುನೀತ್ ಕುಮಾರ್, ಮಹಿಳಾಧ್ಯಕ್ಷೆ ಜಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net