ಬೋಧನೆಯಲ್ಲಿ ಉಂಟಾದ ಗೊಂದಲ ನಿವಾರಿಸಲು ಆಗ್ರಹ

IMG20250219205646.jpg
Published on

ಬೆಳಗಾವಿ: ಬಿಕಾಂ ವಿಷಯದ ಹಂಚಿಕೆ ಮತ್ತು ಬೋಧನೆಯಲ್ಲಿ ಉಂಟಾದ ಗೊಂದಲ ನಿವಾರಿಸಬೇಕು ಎಂದು ಒತ್ತಾಯಿಸಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರದ ಅಧ್ಯಾಪಕರ ಸಂಘದ ಪದಾಧಿಕಾರಿಗಳು ಬುಧವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರಿಗೆ ವಿದ್ಯಾಸಂಗಮ ಆವರಣದಲ್ಲಿ ಮನವಿ ಸಲ್ಲಿಸಿದರು.

ಬಿಕಾಂ ಪದವಿಯಲ್ಲಿ ಮೊದಲ ಸೆಮಿಸ್ಟರ್ ಬೋಧಿಸಲಾಗುವ ಮಾರ್ಕೆಟ್ ಬಿಹೇವಿಯರ್ ಆ್ಯಂಡ್ ಬಿಜಿನೆಸ್ ಡಿಸಿಜನ್ ವಿಷಯವನ್ನು ಅರ್ಥಶಾಸ್ತ್ರದ ಪ್ರಾಧ್ಯಾಪಕರು ಪದವಿ ಕಾಲೇಜುಗಳಲ್ಲಿ ಬೋಧಿಸುತ್ತಿದ್ದಾರೆ. ಆದರೆ, ಈ ವಿಷಯ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರು ಕಲಿಸುವುದು ಸೂಕ್ತ. ಆದರೆ, ಈ ವಿಷಯವನ್ನು ಅರ್ಥಶಾಸ್ತ್ರ ಪ್ರಾಧ್ಯಾಪಕರಿಂದ ಬೋಧನೆ ಮಾಡಿಸುವ ಮೂಲಕ ವಾಣಿಜ್ಯಶಾಸ್ತ್ರ ಅಧ್ಯಾಪಕರಿಗೆ ಕೆಲಸ ದೊರೆಯುತ್ತಿಲ್ಲ ಮತ್ತು ಅನ್ಯಾಯವಾಗುತ್ತಿದೆ. ಆದ್ದರಿಂದ ಆರ್‌ಸಿಯು ವಾಣಿಜ್ಯ ಪದವಿ ವಿಷಯದಲ್ಲಿನ ಎಲ್ಲ ವಿಷಯಗಳನ್ನು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಪಿ.ಎಲ್.ಹರಳೆ, ಉಪಾಧ್ಯಕ್ಷ ಡಿ.ವೈ.ಕಾಂಬ್ಳೆ, ಕಾರ್ಯದರ್ಶಿ ವಿಶ್ವನಾಥ ಮಾನೆ, ಪ್ರೊ.ಚಿದಾನಂದ ಶಿಂಗೆ, ವಿದ್ಯಾ ಜಿರಗೆ, ಅರುಣಾ ಸೂಜಿ, ಮಹಮ್ಮದ್ ನರ್ಕಾಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net