

ರಾಯಚೂರು ಕೋಟೆ ಕಂದಕ ಸರ್ಕಾರಿ ಗೈರಾಣಿ ಭೂಮಿಯನ್ನು ನಗರಸಭೆ ಅಽಕಾರಿಗಳು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಜಾಲ ಮುಂದುವರೆಸಿದ್ದಾರೆ ಎಂದು ಆರೋಪಿಸಿ ಕೂಡಲೇ ಕಂದಾಕ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವೆ ೧೪೯೫ ಮತ್ತು ೧೪೯೬ ಸರ್ಕಾರಿ ಗೈರಾಣಿಯೆಂದು ಕಂದಾಯ, ನಗರಸಭೆ ದಾಖಲೆಗಳಲ್ಲಿ ನಮೂದಾಗಿದ್ದರೂ ಸರ್ಕಾರಿ ಜಾಗವನ್ನು ಮಾರಾಟ ಮಾಡಲು ಸಹಕರಿಸಿದ್ದಾರೆ. ಸರ್ವೇ ನಂ. ೧೪೯೫ ರಲ್ಲಿ ಎರಡು ಎಕರೆ ಒಂಬತ್ತು ಗುಂಟೆ, ೧೪೯೬ ಎರಡು ಎಕರೆ ೨೨ ಗುಂಟೆ ಜಮೀನು ಕಂದಾಯ ದಾಖಲೆಗಳಲ್ಲಿದೆ. ಆದರೆ ನಗರಸಭೆ ಅಽಕಾರಿಗಳು, ಜನಪ್ರತಿನಿದಿಗಳುಸೇರಿ ನಿವೇಶಗಳನ್ನು ಮಾಡಿ ಸಂಖ್ಯೆ ನೀಡಿ ಮಾರಾಟ ಮಾಡಿದ್ದು, ನಕಲಿಯಾಗಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಲಾಗಿದೆ.
ಕಂದಾಯ ಇಲಾಖೆ ಕಾರ್ಯದರ್ಶಿ ತಂಗರಾಜ್ ನೀಡಿರುವ ಆದೇಶದ ಉಲ್ಲಂಘನೆಯಾಗಿದೆ.ಅಲ್ಲದೇ ಹೈಕೋರ್ಟ್ ಸಹ ಕೋಟೆಹತ್ತಿರ ನೂರು ಮೀಟರ್ ಒಳಗೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಸೂಚಿಸಿದೆ. ನಗರದಲ್ಲಿ ಯಾವ ನಿಯಮಗಳೂ ಪಾಲನೆಯಾಗುತ್ತಿಲ್ಲ. ಈ ಕುರಿತು ಜಿಲ್ಲಾಽಕಾರಿಗಳಿಗೆ ದೂರು ನೀಡಲಾಗಿದೆ. ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಭೂ ನ್ಯಾಯಾಲಯಕ್ಕೆ ದೂರು ನೀಡುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಣ್ಣ ನರಸಿಂಹನಾಯಕ, ವಿಶ್ವನಾಥ ಪಟ್ಟಿ, ಹಂಪಯ್ಯನಾಯಕ ಇದ್ದರು.