

ನರಗುಂದ: ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ರಿಕ್ಕಿ ರೈ ಕುಟುಂಬಸ್ಥರಿಗೆ ಸರ್ಕಾರದಿಂದ ಭದ್ರತೆ ಒದಗಿಸಬೇಕು ಎಂದು ಜಯಕರ್ನಾಟಕ ಸಂಘಟನೆ ಸದಸ್ಯರು ಶಿರಸ್ತೇದಾರ್ ಮಂಗಳವಾರ ಆಗ್ರಹಿಸಿದರು. ಈ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕನ್ನಡ ನಾಡು, ನುಡಿಯ ನಿರಂತರ ಸೇವೆ ಮಾಡುತ್ತಿರುವ ರಿಕ್ಕಿ ರೈ ಅವರ ಮೇಲೆ ನಡೆದಿರುವ ಗುಂಡಿನ ದಾಳಿಯನ್ನು ಸಂಘಟನೆಯಿಂದ ಸಂಪೂರ್ಣ ಖಂಡಿಸಲಾಗುತ್ತಿದೆ ಎಂದರು. ಶಿರಸ್ತೇದಾರ್ ಎಸ್. ಸುನಂದಾ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಾಧ್ಯಕ್ಷ ಬಸವರಾಜ ತಾವರೆ, ಚನ್ನು ನಂದಿ, ವಿಕಾಸ ಮುಧೋಳೆ, ನಾಗರಾಜ ಜಾಲಗಾರ, ಮಂಜುನಾಥ ಕಲಾಲ, ಶಂಕರ ಜಾಲಗಾರ, ಶಿವಯೋಗಿ ಬೆಂಡಿಗೇರಿ, ಉಪಸ್ಥಿತರಿದ್ದರು.