ನಿವೇಶನ ರಹಿತರಿಗೆ ಸೂರು ಒದಗಿಸಲು ಆಗ್ರಹ

28 ckm 1
ಚಿಕ್ಕಮಗಳೂರು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ ಕಾರ್ಯಕರ್ತರು ನಗರದಲ್ಲಿ ಸಾವಿರಾರು ನಿವೇಶನ ರಹಿತರಿಗೆ ನಿವೇಶನವನ್ನು ಹಂಚಿ ಶೀಘ್ರವೇ ಸೂರನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು. ಕೆರೆಮಕ್ಕಿ ರಮೇಶ್, ತಂಪಿತಾ ಗೌಡ, ರಾಧಾ ಸುಂದ್ರೇಶ್, ವಿಜಯಕುಮಾರ್, ರೇಣುಕಾರಾಧ್ಯ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರದಲ್ಲಿ ಸಾವಿರಾರು ನಿವೇಶನ ರಹಿತರಿಗೆ ನಿವೇಶನವನ್ನು ಹಂಚಿ ಶೀಘ್ರವೇ ಸೂರನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ನಗರ ಘಟಕದಿಂದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಸಾವಿರಾರು ಬಡ ಕೂಲಿ ಕಾರ್ಮಿಕರ ಕುಟುಂಬಗಳು ಸ್ವಂತದ್ದೆAದು ಹೇಳಿಕೊಂಡು ಸುಖಿ ಜೀವನ ನಡೆಸಲು ಸೂರಿಲ್ಲದೇ ಅಲೆಮಾರಿಗಳಂತೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವಿರಾರು ಕುಟುಂಬಗಳಿಗೆ ನೆತ್ತಿಯ ಮೇಲೆ ಸೂರಿಲ್ಲ. ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ವಿಪರೀತವಾಗಿದೆ. ಅಲ್ಲದೇ ನಾಗರೀಕ ಸೌಲಭ್ಯದ ಹಕ್ಕಿನಿಂದ ವಂಚಿತರಾಗಿ ಬದುಕು ತೀವ್ರ ದುಸ್ತರವಾಗಿದೆ. ಈ ಬಗ್ಗೆ ಅನೇಕ ಭಾರಿ ಪ್ರತಿಭಟನೆ, ಮನವಿಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಕುಟುಂಬಕ್ಕೊAದು ಮನೆಯ ವ್ಯವಸ್ಥೆ ಕಲ್ಪಿಸುವುದಾಗಿ ಚುಣಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಆದರೀಗÀ ಸರ್ಕಾರ ಅಧಿಕಾರದ ಗದ್ದುಗೆಗೇರಿ ಒಂದೂವರೆ ವರ್ಷ ಕಳೆದರೂ ನಿವೇಶನ ರಹಿತರ ಸಮಸ್ಯೆಗಳನ್ನು ಇಂದಿಗೂ ಆಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಾಗಿ ನಗರದಲ್ಲಿ ಬಹಳಷ್ಟು ಬಡಾವಣೆಗಳಲ್ಲಿ ನಿವೇಶನ, ಸೂರುಗಳಿವೆ. ಆದರೆ ಹಕ್ಕುಪತ್ರ ವಿತರಿಸಿಲ್ಲ. ಫ್ಲಾಟ್ ಕೊಡುವುದಾಗಿ ಹೇಳಿ ಜನರಿಂದ ಹಣ ವಸೂಲಿ ಮಾಡಿ ಫ್ಲಾಟ್‌ಗಳನ್ನು ನೀಡುತ್ತಿಲ್ಲ. ನಗರದ ರಸ್ತೆ ಮತ್ತು ಅಡ್ಡ ರಸ್ತೆಗಳಿಗೆ ವಾರ್ಡ್ ನಂ ಹಾಗೂ ಫಲಕಗಳನ್ನು ಅಳವಡಿಸಿಲ್ಲ ಎಂದು ದೂರಿದರು.
ನಗರ ಕಾರ್ಯದರ್ಶಿ ತಂಪಿತಗೌಡ ಮಾತನಾಡಿ, ನಗರದ ಸುತ್ತಲಿರುವ ಜಾಗ ಖರೀದಿಸಲು ರಾಜೀವ್ ಗಾಂಧಿ ವಸತಿ ನಿಗಮದಿಂದ ಮಾರ್ಕೆಟ್ ಬೆಲೆ ಮೂರುಪಟ್ಟು ಹಣಕೊಟ್ಟು ಕೊಂಡುಕೊಳ್ಳುವ ಅವಕಾಶವಿರುವುದರಿಂದ ನಗರಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ಜಾಗವನ್ನು ಖರೀದಿಸಿ ವಸತಿಗಳನ್ನಾಗಿ ನಿರ್ಮಿಸಿ ಹಂಚಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ನಗರಸಭಾ ಕಚೇರಿಗೆ ಮನವಿ ಸಲ್ಲಿಸಿ ನಿವೇಶನಕ್ಕೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಮಂಡಳಿ ಸದಸ್ಯ ರೇಣುಕಾರಾಧ್ಯ, ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದ್ರೇಶ್, ಸದಸ್ಯ ವಿಜಯ್ ಕುಮಾರ್, ನಗರ ಸಹ ಕಾರ್ಯದರ್ಶಿಗಳಾದ ಜ್ಯೋತಿ, ಎಚ್.ಕೆ.ಸೋಮೇಗೌಡ, ಹಮೀದ ಭಾನು, ಖಜಾಂಚಿ ಸಿ.ವಸಂತ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net