ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಆಗ್ರಹ

SVR BUS
Published on

ಸವಣೂರ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು ಎಂದು ತಾಲೂಕಿನ ಹಳೇಮೆಳ್ಳಾಗಟ್ಟಿ, ಪ್ಲಾಟ್ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿದಿನ ಬೆಳಗ್ಗೆ ಸವಣೂರಿನಿಂದ ಹಾವೇರಿಗೆ ಹೋಗುವ ಬಸ್‌ನಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವ ಸ್ಥಿತಿ ಎದುರಾಗಿದೆ. ಮೆಳ್ಳಾಗಟ್ಟಿ ಸೇರಿ ವಿವಿಧ ಗ್ರಾಮದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಬಸ್ ಸೌಕರ್ಯ ಕೊರತೆ ಹಿನ್ನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು. ಬೆಳಗ್ಗೆ 9.30ಕ್ಕೆ ಸವಣೂರಿನಿಂದ (ಮನ್ನಂಗಿ, ಮೆಳ್ಳಾಗಟ್ಟಿ ಮಾರ್ಗ) ಹಾವೇರಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸದಿದ್ದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಗನಗೌಡ ಹೊಂಬರಡಿ, ನಾಗರಾಜಗೌಡ ಲಕ್ಕನಗೌಡ್ರ, ಮಂಜುನಾಥ ಹೊಸಗೌಡ್ರ, ವಿರೂಪಾಕ್ಷಗೌಡ ಲಕ್ಕನಗೌಡ್ರ, ವಸಂತ ಕಾಯಕದ, ಹೊನ್ನಪ್ಪ ಮರೆಯಮ್ಮನವರ, ಮರಿಗೌಡ ಲಕ್ಕನಗೌಡ್ರ, ಕಲ್ಲಪ್ಪ ಹಿತ್ತಲಮನಿ, ಕಲ್ಲಪ್ಪ ಪೂಜಾರ, ಚನ್ನಪ್ಪ ಅಂಬಿಗೇರ, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net