ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

STUDENT
Published on

ಲಕ್ಷ್ಮೇಶ್ವರ: ಸಮೀಪದ ಸೂರಣಗಿ ಗ್ರಾಮ ಸೇರಿದಂತೆ ಮಾರ್ಗದ ಹಲವು ಗ್ರಾಮಗಳ ವಿದ್ಯಾರ್ಥಿಗಳು ಶಾಲಾ ವೇಳೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಡಿಪೋ ಮ್ಯಾನೇಜರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಸೂರಣಗಿ ಗ್ರಾಮಕ್ಕೆ ಶಾಲಾ ವೇಳೆ ಬರುತ್ತಿದ್ದ ಬೆಳ್ಳಟ್ಟಿ-ಹುಬ್ಬಳ್ಳಿ ಮಾರ್ಗದ ಬಸ್ ಈಗ ಸರಿಯಾದ ವೇಳೆಗೆ ಬರುತ್ತಿಲ್ಲ. ಇದರಿಂದ ಶಾಲಾ-ಕಾಲೇಜ್‌ನ ನೂರಾರು ವಿದ್ಯಾರ್ಥಿಗಳು ತರಗತಿಯಿಂದ ಹೊರಗುಳಿಯಬೇಕಾಗುತ್ತಿದೆ. ಬರುವ ಬಸ್‌ಗಳು ತುಂಬಿಕೊಂಡೇ ಬಂದಿರುತ್ತದೆ. ಈ ವೇಳೆ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರು, ನೂರಾರು ವಿದ್ಯಾರ್ಥಿಗಳು ಇದೇ ಬಸ್‌ನಲ್ಲಿ ಹೋಗುವುದು ಕಷ್ಟವಾಗುತ್ತಿದೆ. ಬೆಳಗ್ಗೆ 8-30 ರಿಂದ 8-45ರ ಒಳಗಾಗಿ ಒಂದು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಡಿಪೋ ಸಿಬ್ಬಂದಿ ಸರ್ಪರಾಜ ಮನವಿ ಸ್ವೀಕರಿಸಿದರು. ಸೂರಣಗಿ, ಉಂಡೇನಹಳ್ಳಿ, ದೊಡ್ಡೂರ, ಸುವರ್ಣಗಿರಿ ಗ್ರಾಮದ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net