ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ಆಗ್ರಹ

11HDK00003
ಎಚ್.ಡಿ.ಕೋಟೆ ತಾಲೂಕಿನ ಮಗ್ಗೆ ಮತ್ತು ಮಳಲಿ ಗ್ರಾಮದಲ್ಲಿ ಕಾಡಾನೆ ದಾಳಿ ತಡೆಗಟ್ಟುವಂತೆ ಆಗ್ರಹಿಸಿ ಗ್ರಾಮಸ್ಥರು ಅಂತರಸಂತೆಯ ಅರಣ್ಯ ಇಲಾಖೆಗೆ ಕಚೇರಿಗೆ ತೆರಳಿ ಎಸಿಎಫ್ ಮಧು ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
Published on

ಎಚ್.ಡಿ.ಕೋಟೆ: ತಾಲೂಕಿನ ಮಗ್ಗೆ ಮತ್ತು ಮಳಲಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗುತ್ತಿದ್ದು, ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ಗ್ರಾಮಸ್ಥರು ಅಂತರಸಂತೆಯ ಅರಣ್ಯ ಇಲಾಖೆಗೆ ಕಚೇರಿಗೆ ತೆರಳಿ ಎಸಿಎಫ್ ಮಧುಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಗ್ಗೆ ಗ್ರಾಮದ ನಿವಾಸಿ, ಶುಂಠಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸುಂದ್ರ ಮಾತನಾಡಿ, ಕಾಡಂಚಿನ ಪ್ರದೇಶದಲ್ಲಿ ಹಿಂದೆ ಆಳವಾದ ಟ್ರಂಚ್‌ಗಳು ಇದ್ದಾಗ ಆನೆಗಳು ಬರುತ್ತಿರಲಿಲ್ಲ. ಈಗ ಟ್ರಂಚ್ ಅಲ್ಲಲ್ಲಿ ಮುಚ್ಚಿವೆ. ಇದರಿಂದಾಗಿ ಆನೆಗಳು ನಾಡಿಗೆ ಬರುತ್ತಿವೆ. ಪ್ರಮುಖವಾಗಿ ಈ ಗ್ರಾಮಗಳಲ್ಲಿ ಬೆಳೆದ ಬಾಳೆ, ಟೊಮ್ಯಾಟೊ, ಮರಗೆಣಸು, ತೆಂಗು ಮತ್ತು ಈಗ ನೆಟ್ಟ ಅಡಕೆಯನ್ನೆಲ್ಲ ಕಾಡಾನೆಗಳು ತಿಂದು ತುಳಿದು ಹೋಗುತ್ತಿವೆ ಅಲಳು ತೋಡಿಕೊಂಡರು.

ಮನವಿ ಸ್ವೀಕರಿಸಿ ಅರಣ್ಯ ಇಲಾಖೆಯ ಎಸಿಎಫ್ ಮಧು ಮಾತನಾಡಿ, ಅರಣ್ಯ ಇಲಾಖೆಯಿಂದ ರೈತರಿಗೆ ಪೂರಕವಾದ ಕೆಲಸಗಳನ್ನು ಮಾಡಲಾಗುತ್ತಿದೆ. ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ಅರಣ್ಯ ಸಿಬ್ಬಂದಿಯಿಂದ ರಾತ್ರಿ ಗಸ್ತನ್ನು ಹೆಚ್ಚಿಸಲಾಗಿದೆ. ಅಲ್ಲದೆ ಬೆಳೆ ಹಾನಿಯಾದ ಸಂದರ್ಭದಲ್ಲಿ ಇಲಾಖೆಯಿಂದ ತೆರಳಿ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ಬೇಕಾದ ಕ್ರಮಗಳನ್ನು ವಹಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

ಮಗ್ಗೆ ಮತ್ತು ಮಳಲಿ ಗ್ರಾಮದ ಪ್ರಕಾಶ್, ರಾಜು, ನಾಗರಾಜು, ತಿಮ್ಮಯ್ಯ, ಪ್ರವೀಣ, ಎಜ್ಜೂರ, ಸೋಮೇಶ್, ಶಿವಪ್ಪ ಲಕ್ಷ್ಮಣ್, ಮರಿಲಿಂಗಯ್ಯ, ನಾಗಯ್ಯ, ಶಿವಕುಮಾರ್, ಲೋಕೇಶ್ ಎನ್.ಬೆಳ್ತೂರು ಗ್ರಾಮದ ರಾಜು, ಬಾಣಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net