ರಸ್ತೆಗೆ ರೋಹನ್ ಬೋಪಣ್ಣ ಹೆಸರಿಡಲು ಒತ್ತಾಯ

rohan bopanna
Published on

ಮಡಿಕೇರಿ: ವಿಶ್ವದ ಡಬಲ್ಸ್ ಮೆನ್ಸ್ ಟೆನ್ನೀಸ್ ಕ್ರೀಡೆಯಲ್ಲಿ ನಂಬರ್ ೧ ದಾಖಲೆಮೆರೆದ ಗೌರವಾರ್ಥ ಪದ್ಮಶ್ರೀ ವಿಜೇತ ಮಚ್ಚಂಡ ರೋಹನ್ ಬೋಪಣ್ಣರವರ ಹೆಸರನ್ನು ಮಡಿಕೇರಿ ನಗರದ ಮುಖ್ಯ ರಸ್ತೆಗೆ ಹಾಕುವಂತೆ ಅಖಿಲ ಕೊಡವ ಸಮಾಜದ ವತಿಯಿಂದ ನಗರಸಭೆಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.


ಇದಕ್ಕೂ ಮೊದಲು ಅಖಿಲಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕಾರ್ಯದರ್ಶಿ ಕೀತಿಯಂಡ ವಿಜಯ್ ಕುಮಾರ್, ಜಂಟಿಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್ ಹಾಗೂ ನಂದೇಟಿರ ರಾಜಮಾದಪ್ಪರವರು ಮಾದಾಪುರ ಸಮೀಪ ಗರಗರಂದೂರಿನ ಪ್ರದ್ಮಶ್ರೀ ಮಚ್ಚಂಡ ರೋಹನ್ ಬೋಪಣ್ಣರವರ ಮನೆಗೆತೆರಳಿ ಪೋಷಕರಾದ ಮಚ್ಚಂಡ ಪ್ರಭಾಬೋಪಣ್ಣ ಹಾಗೂ ದಂಪತಿಗೆ ಅಖಿಲಕೊಡವ ಸಮಾಜದ ವತಿಯಿಂದ ಹೂಗುಚ್ಚ ಹಾಗೂ ಪ್ರಶಂಸನಾ ಪತ್ರನೀಡಿ ಗೌರವಿಸಲಾಯಿತು. ರೋಹನ್ ಬೋಪಣ್ಣನವರ ಸಾಧನೆಗೆ ಮೆಚ್ಚಿ ಅಖಿಲ ಕೊಡವಸಮಾಜದ ಗೌರವ ಸದಸ್ಯತ್ವ ನೀಡಿದರು.


ನಂತರ ನಗರಸಭೆಗೆ ಆಗಮಿಸಿದ ಅಖಿಲ ಕೊಡವ ಸಮಾಜದ ಪದಾಧಿಕಾರಿಗಳು ರೋಹನ್ ಬೋಪಣ್ಣರವರ ಸಾಧನೆಯನ್ನು ಶ್ಲಾಘೀಸಿ ಪದ್ಮಶ್ರೀ ನೀಡಲಾಗುತ್ತಿದೆ. ಈ ಹಿನ್ನೆಲೆ ಮಡಿಕೇರಿ ನಗರದ ಮುಖ್ಯ ರಸ್ತೆಗೆ ರೋಹನ್ ಬೋಪಣ್ಣರವರ ಹೆಸರಿಡುವಂತೆ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯರವರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net