ಬೇಡಿಕೆ ಈಡೇರಿಸಲು ಆಗ್ರಹ

1 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಂದಾಯ ಇಲಾಖೆಯ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಂದಾಯ ಇಲಾಖೆ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯದಾದ್ಯಂತ ಕಂದಾಯ ಇಲಾಖೆಯ 600 ಜನ ಗ್ರೇಡ್-2 ನೌಕರರಿಗೆ ಮುಂಬಡ್ತಿ ಸಿಗಬೇಕಿತ್ತು. ಆದರೆ, 400 ಜನರಿಗೆ ಮಾತ್ರ ಮುಂಬಡ್ತಿ ನೀಡಲಾಗಿದೆ. ಸರ್ಕಾರಿ ಗ್ರೇಡ್-2 ಹಂತದ ಅಧಿಕಾರಿಗಳನ್ನು ಕಡಿಮೆ ಮಾಡಿ ಹೆಚ್ಚಿಗೆ ಗ್ರೇಡ್-1 ನೌಕರರನ್ನು ಹೆಚ್ಚಿಗೆ ನಿಯುಕ್ತಿ ಮಾಡಲು ಮುಂದಾಗಿದೆ. ಇದರಿಂದ ಗ್ರೇಡ್-2 ಹಂತದ ನೌಕರರ ಮುಂಬಡ್ತಿಗೆ ಕೊಕ್ಕೆ ಬಿದ್ದಂತಾಗಿದೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಹೆಚ್ಚಿಗೆ ಗ್ರೇಡ್-2 ಹುದ್ದೆಗಳನ್ನು ಸೃಷ್ಟಿ ಮಾಡಿ, ನೌಕರರಿಗೆ ಮುಂಬಡ್ತಿ ನೀಡಬೇಕು ಎಂದು ಆಗ್ರಹಿದ್ದಾರೆ.
ಕಂದಾಯ ಇಲಾಖೆ ಹಿತಕ್ಕಾಗಿ ತಹಸೀಲಾರ್ ಗ್ರೇಡ್-2 ವೃಂದ ಬಲವನ್ನು ಪುನರ್ ಪರಿಶೀಲಿಸಿ ನಿಗದಿಪಡಿಸಬೇಕು. ಒಂದು ವೇಳೆ 19-12-2023ರಂತೆ ತಾತ್ಕಾಲಿಕ ವೃಂದ ಬಲವನ್ನು ಗ್ರೇಡ್-2 ತಹಸೀಲ್ದಾರ 447ಕ್ಕೆ ನಿಗದಿಪಡಿಸಿದಂತೆ ಸುಮಾರು 200 ತಹಸೀಲ್ದಾರ ಗ್ರೇಡ್-2 ಕಡಿತಗೊಳಿಸಿದರೆ, ಇದರಿಂದ ರಾಜ್ಯದಲ್ಲಿ ಸುಮಾರು 30,000ಸಿ ದರ್ಜೆ ನೌಕರರು ಮುಂಬಡ್ತಿಯಿಂದ ವಂಚಿತರಾಗಿದ್ದು, ಬಿ ದರ್ಜೆ ಅಧಿಕಾರಕ್ಕೆ ಬರದಂತೆ ಸರ್ಕಾರ ಸಿ ದರ್ಜೆ ನೌಕರರಿಗೆ ವಂಚನೆ ಮಾಡದಂತೆ ಆಗುತ್ತದೆ. ಹೀಗಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು. ನೌಕರರಾದ ಮಲ್ಲಿಕಾರ್ಜುನ ಸೊಲಗಿ, ಎಸ್.ಬಿ. ಮೇಟಿ, ಶ್ರೀಧರ ಕೆ., ಎ.ಎನ್. ಜೋಶಿ, ಎಸ್.ಎ. ಬಳಿಗೇರ, ಜೆ.ಡಿ. ಪಾಟೀಲ, ವಿನಾಯಕ ಬಿ., ಪ್ರವೀಣ ಪಾಟೀಲ, ಕೆ.ಎ. ಝಂಗೂರ, ಎಸ್.ಡಿ. ನದಾಫ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net