

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದಿ. ಶ್ರೀ ಲಕ್ಷ್ಮಣ ಹಿರೇಕೆರೂರ ಆಟೋಚಾಲಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಶಕ್ತಿ ಯೋಜನೆ ಜಾರಿಯಿಂದ ನಾವೆಲ್ಲ ಕಂಗಾಲಾಗಿದ್ದೇವೆ. ಶಹರ ವ್ಯಾಪ್ತಿಯಲ್ಲಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸೇವೆ ಕಲ್ಪಿಸಬಾರದು. ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಬೇಕು. ಆಟೋ ಇನ್ಶೂರೆನ್ಸ್ ತೆರಿಗೆ ಕಡಿತಗೊಳಿಸಬೇಕು. ಪ್ರಧಾನಿ ಮೋದಿ ಅವರು ನಮ್ಮನ್ನು ಅಸಂಘಟಿತ ಕಾರ್ವಿುಕ ವಲಯ ಎಂದು ಘೊಷಿಸಿದ್ದಾರೆ. ಆದರೆ, ಅಗತ್ಯ ಸೌಲಭ್ಯ ನೀಡಿಲ್ಲ. ಲೈಸೆನ್ಸ್ ಹೊಂದಿದ ಆಟೋ ಚಾಲಕರಿಗೆ ಬ್ಯಾಂಕ್ನಲ್ಲಿ ಸಬ್ಸಿಡಿ ಸಹಿತ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಆಟೋ ಚಾಲಕರು ಆಗ್ರಹಿಸಿದರು. ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ರವಾನಿಸಿದರು.
ಅಧ್ಯಕ್ಷ ಹನುಮಂತಪ್ಪ ಪವಾಡಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಳ್ಳಾಗಡ್ಡಿ, ರಾಜು ಕಾಲವಾಡ, ಸದಾನಂದ ಪವಾಡಿ, ನಾಗರಾಜ ಮಣ್ಣವಡ್ಡರ್, ಇತರರು ಇದ್ದರು.