ಸಾರ್ವಜನಿಕ ಶೌಚಗೃಹ ಸ್ವಚ್ಛವಾಗಿಡಲು ಆಗ್ರಹ

New PM New
Published on

ಹುಬ್ಬಳ್ಳಿ : ನಗರದಲ್ಲಿನ ಶೌಚಗೃಹಗಳು ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರು ಮಲ ಮೂತ್ರ ವಿಸರ್ಜನೆಗೆ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ, ನ. 17ರೊಳಗೆ ಎಲ್ಲ ಶೌಚಗೃಹಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕು. ಇಲ್ಲದಿದ್ದರೆ ಅಕ್ಕಾ ಫೌಂಡೇಷನ್ ಟ್ರಸ್ಟ್ ವತಿಯಿಂದ ಭಿಕ್ಷಾಟನೆ ನಡೆಸಿ, ಶೌಚಗೃಹ ದುರಸ್ತಿಗೊಳಿಸುವುದಾಗಿ ಟ್ರಸ್ಟ್ ಅಧ್ಯಕ್ಷ ವೀರಪ್ಪ ಅರಕೇರಿ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಾಲಿಕೆ ಆಯುಕ್ತರ ಅಧಿಕೃತ ಸರ್ಕಾರಿ ನಿವಾಸದ ಹಿಂಭಾಗದ ಸಾರ್ವಜನಿಕ ಶೌಚಾಗೃಹ ಹಾಳಾಗಿದ್ದರೂ, ಪಾಲಿಕೆ ಸಿಬ್ಬಂದಿಗೆ ಕಾಣದಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೇಪರ್, ಇ ವೇಸ್ಟ್​ನಿಂದ ಬಂದ 5 ಸಾವಿರ ರೂ.ಗಳನ್ನು ಉತ್ತರ ಭಾರತದಲ್ಲಿ ಉಂಟಾದ ಮೇಘ ಸ್ಫೋಟ ಮತ್ತು ಗುಡ್ಡ ಕುಸಿತದಲ್ಲಿನ ಸಂತ್ರಸ್ತರಿಗಾಗಿ ಪಿಎಂ ಕೇರ್ ಫಂಡ್ ನಿಧಿಗೆ ನ. 17ರಂದು ಜಿಲ್ಲಾದಿಕಾರಿ ಮುಖಾಂತರ ರವಾನಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net