

ರಾಯಚೂರು ಜಿಲ್ಲೆಯಲ್ಲಿ ಗೋವು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು, ಗೋ ರಕ್ಷಣೆಗೆ ಪ್ರಮುಖ ರಸ್ತೆಗಳ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮರ್ಾ ಸೇರಿದಂತೆ ಇನ್ನಿತರ ಸುರಕ್ಷಿತ ಸಾಧನಗಳನ್ನು ಅಳವಡಿಸಬೇಕೆಂದು ಗೋಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಠಾಕೂರ್ ವಿನಯಸಿಂಗ್ ಒತ್ತಾಯ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಹೊರವಲಯ ಚಕ್‌ಪೋಸ್ಟ್‌ನಲ್ಲಿ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಕಳ್ಳ ಸಾಗಣಿಕೆ ಮಾಡಿ ಖಶಾಯಖಾನೆಗೆ ದೂಡುತ್ತಿರುವ ಪ್ರಕರಣಗಳ ಹೆಚ್ಚಳವಾಗಿದೆ . ಗೋ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು,ಚೆಕ್‌ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ, ಸಿಸಿಟಿವಿ ಸೇರಿದಂತೆ ಸುರಕ್ಷಿತ ಸಾಧನಗಳನ್ನು ಅಳವಡಿಸಿದಾಗ ಮಾತ್ರ ತಡೆಗಟ್ಟಲು ಸಾದ್ಯವಾಗುತ್ತದೆ. ಸರ್ಕಾರ ಈಗಾಗಲೇ ಜಾನುವಾರ ಅಕ್ರಮ ಸಾಗಣೆ ತಡೆ ವಿಶೇಷ ಕಾನೂನನ್ನು ಜಾರಿಗೆ ತಂದಿದೆ.
ಆದರೂ ಸಹ ಜಾನುವಾರುಗಳನ್ನು ಕಳ್ಳ ಸಾಗಣೆ ನಿಯಂತ್ರಣಕ್ಕೆ ಬಂದಿಲ್ಲ.ಅಕ್ರಮವಾಗಿ ಗೋವು ಸಾಗಾಣಿಕೆ ಮಾಡುತ್ತಿರುವ ವೇಳೆ ತಡೆದು ನಿಲ್ಲಿಸಿದರೆ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕುತ್ತಿರುವ ಹಲವು ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ಮಾಹಿತಿ ನೀಡಿದವರಿಗೂ ಸಹ ರಕ್ಷಣೆಯನ್ನು ಒದಗಿಸುವ ಕಾರ್ಯವಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಾಳಪ್ಪ ಪಾಟೀಲ್, ಸ್ವಪ್ನ ಸಿಂಗ್, ರಾಯರೆಡ್ಡಿ ಇದ್ದರು.