ಬೆಂಗಳೂರು: ಹದಿನಾರು ವರ್ಷದಿಂದ ವಾರ್ಷಿಕ ಸಭೆ ನಡೆಸದ, ಲೆಕ್ಕಪರಿಶೋಧನಾ ವರದಿ ಸಲ್ಲಿಸದ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಹೊಸದಾಗಿ ಚುನಾವಣೆ ನಡೆಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ಸಹಕಾರ ಸಂಘಗಳ ಉಪ ನಿಬಂಧಕರನ್ನು ಆಗ್ರಹಿಸಿದ್ದಾರೆ.
ವರನಟ ಡಾ. ರಾಜ್ ಕುಮಾರ್ ನಿಧನದ ನಂತರ 2008ರಿಂದ ಇದುವರೆವಿಗೆ ಕಲಾವಿದರ ಸಂಘದ ಚುನಾವಣೆಯನ್ನೇ ನಡೆಸಿಲ್ಲ. ಪ್ರಸ್ತುತ ಸಂಘದ ಖಜಾಂಚಿಯಾಗಿ ಹಿರಿಯ ನಟ ದೊಡ್ಡಣ್ಣ ಮಾತ್ರ ಗುರುತಿಸಿಕೊಂಡಿದ್ದು, ಬೇರೆ ಕಲಾವಿದರು ಜವಾಬ್ದಾರಿ ಹೊತ್ತಿರುವ ಮಾಹಿತಿ ಲಭ್ಯವಾಗಿಲ್ಲ. ಸಹಕಾರ ಸಂಘಗಳ ನಿಯಮದಂತೆ ಪ್ರತೀ ವರ್ಷ ಸಂಘಗಳ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಿ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನಡೆಸಿ ನಡಾವಳಿಯನ್ನು ಸಹಕಾರ ನಿಬಂಧಕರಿಗೆ ಸಲ್ಲಿಸಬೇಕು. ಆದರೆ, ಕಲಾವಿದರ ಸಂಘ 16 ವರ್ಷದಿಂದ ಈ ಯಾವುದೇ ಕೆಲಸ ಮಾಡದೆ ಮುಗುಂ ಆಗಿದ್ದುಕೊಂಡೇ ಕಾರ್ಯನಿರ್ವಹಿಸುತ್ತಾ ಲೋಪ ಎಸಗಿದೆ ಎಂದು ಅವರು ದೂರಿದ್ದಾರೆ.
ಹೊಸಬರಿಗೆ ಸಿಗದ ಸದಸ್ಯತ್ವ ನೀಡಿ:
1979 ರಲ್ಲಿ ಸ್ಥಾಪನೆಯಾದ ಕಲಾವಿದರ ಸಂಘದಲ್ಲಿ ಸದಸ್ಯರಾಗಿದ್ದವರ ಪೈಕಿ ಬಹುತೇಕರು ಈಗಾಗಲೇ ನಿಧನ ಹೊಂದಿದ್ದಾರೆ. ಪ್ರಸ್ತುತ ಸಂಘದಲ್ಲಿ ಕೇವಲ 70-80 ಕಲಾವಿದರು ಮಾತ್ರ ಉಳಿದುಕೊಂಡಿದ್ದಾರೆ. ಆದರೆ, ಕಳೆದ ಒಂದೂವರೆ ದಶಕದಲ್ಲಿ ಅಂದಾಜು 500ಕ್ಕೂ ಹೆಚ್ಚು ಹಿರಿಯ ಕಿರಿಯ ಕಲಾವಿದರು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲಾದರೂ ಹೊಸ ಕಲಾವಿದರಿಗೆ ಸದಸ್ಯತ್ವ ನೀಡಿ ಪಾರದರ್ಶಕ ರೀತಿಯಲ್ಲಿ ಸಂಘಕ್ಕೆ ಹೊಸದಾಗಿ ಚುನಾವಣೆಯನ್ನು ನಡೆಸಬೇಕು ಎಂದು ಎನ್.ಆರ್.ರಮೇಶ್ ಅವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.