ಪಾಸ್ಟರ್ ಪ್ರವೀಣ ಪಗಡಾಲ್ ಪ್ರಕರಣ ಸಿಬಿಐಗೆ ಒಪ್ಪಿಸಲು ಒತ್ತಾಯ

RAICHUR
RAICHUR
Published on

ರಾಯಚೂರು ತೆಲಂಗಾಣದ ಪಾಸ್ಟರ್ ಪ್ರವೀಣ ಪಗಡಾಲ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಗುರುವಾರ ಕಲ್ವರಿ -Áಸ್ಟ್ರ್ ಅಸೋಸಿಯೇಷನ್ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಪ್ರವೀಣ್ ಪಗಡಾಲ್ ಕೊ¯ಪ್ರಕರಣದಲ್ಲಿರುವ ಆರೋಪಿಗಳನ್ನು ಬಂಽಸುವAತೆ ಆಕ್ರೋಶ ವ್ಯಕ್ತಪಡಿಸಿದರು. ಅಸೋಸಿಯೇಷನ್ ಅಧ್ಯಕ್ಷ -Áದರ ಜಾನವೆಸ್ಲಿ ಮಾತನಾಡಿ, ಹೈದ್ರಾಬಾದನಿಂದ ರಾಜಮಂಡ್ರಿಗೆ ಬೈಕ್ ಮೇಲೆ ತೆರಳುತ್ತಿದ್ದಾಗ ರಸ್ತೆ ಅಪಘಾತವಾಗಿದೆ ಎಂದು ಸುಳ್ಳು ವರದಿ ದಾಖಲಿಸಿದ್ದಾರೆ. ಪ್ರವೀಣ ಪಗಡಾಲ್ ಇವರ ಮೈ ಮೇಲೆ ಹಲ್ಲೆ ನಡೆಸಿದ ಗಾಯಗಳಾಗಿದ್ದು, ಇದು ಕೊಲೆಯ ಸಂಚಾಗಿದೆ, ಅಪಘಾತ ಎಂದು ಬಿಂಬಿಸಲಾಗಿದೆ, ಇದು ಅಪಘಾತವಲ್ಲ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.

ಪ್ರವೀಣ್ ಪಗಡಾಲ್ ಅವರನ್ನು ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆ, ಕೊಲೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಒತ್ತಾಯಿಸಿದರು. ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷಿಯಾಗಬೇಕು, ಪ್ರವೀಣ ಪಗಡಾಲ್ ಇವರು ಜೀವ ಬೆದರಿಕೆಯಿದೆ ಎಂದು ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದೀಗ ಅವರ ಕೊಲೆಯಾಗಿದ್ದು, ಪ್ರಕರಣವನ್ನು ಕಾನೂನು ರೀತಿಯಲ್ಲಿ ತನಿಖೆ ನಡೆಸಿ ಘಟನೆ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆAದು ಮನವಿ ಮಾಡಿದರು.

ಈ ಸಂದರ್ಭದಲ್ಲಿ -Áಸ್ಟರ್ ವಿಲ್ಸನ್ ರವಿ ಕುಮಾರ, ಸಿ.ಪ್ರಭಾಕರ, ಜೆಮ್ಸಾ÷ಸ್ಟರ್, ಮಾರ್ಟಿನ್, ರಾಜೇಶ, ದೇವದಾಸ, ರುಬಿನ್, ಶಿವುಕುಮಾರ, ಅವಿಲ್ ಕುಮಾರ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net