ಬಂಕಾಪುರಕ್ಕೆ ತಾಲೂಕು ಸ್ಥಾನಮಾನ ನೀಡಲು ಒತ್ತಾಯ

Demand to give Taluk status to Bankapur
Published on

ಬಂಕಾಪುರ: ಬಂಕಾಪುರಕ್ಕೆ ಮರಳಿ ತಾಲೂಕು ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಬಂಕಾಪುರ ತಾಲೂಕು ಪುನರುತ್ಥಾನ ಹೋರಾಟ ಸಮಿತಿ ಪಟ್ಟಣದಲ್ಲಿ ಶನಿವಾರ ಕಪ್ಪುಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಬಂಕಾಪುರ 1953ರವರೆಗೆ ತಾಲೂಕು ಕೇಂದ್ರವಾಗಿತ್ತು. ಬಂಕಾಪುರ ತಾಲೂಕು ಸ್ಥಾನಮಾನ ಹೊಂದಿದಾಗ ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಆದರೆ, ಕ್ರಮೇಣ ತನ್ನ ವೈಭವ ಕಳೆದುಕೊಂಡಿದೆ. ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜ್, ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ, ವಸತಿಗೃಹಗಳು, ಸಾರಿಗೆ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಕರ್ಯಗಳಿದ ವಂಚಿತವಾಗಿದೆ. ಪಟ್ಟಣಕ್ಕೆ ತಾಲೂಕು ಸ್ಥಾನ ಮರಳಿ ನೀಡಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ಸಮಿತಿ ಹೋರಾಟ ಮಾಡುತ್ತಿದೆ. 2023ರ ಹಿಂದಿನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅವರು ನೀಡಿದ ಭರವಸೆ ಈಡೇರಿಲ್ಲ ಎಂದು ದೂರಿದರು.

ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಹಿರಿಯರ ಮಾರ್ಗದರ್ಶನದಂತೆ ಉಪಚುನಾವಣೆ ಮತದಾನ ಬಹಿಷ್ಕರಿಸಿ, ಕಪ್ಪು ಬಟ್ಟೆ ಕಟ್ಟಿಕೊಂಡು ಹೋರಾಟ ಮುಂದುವರಿಸುತ್ತೇವೆ ಎಂದು ಸಮಿತಿಯ ಎ.ಕೆ. ಆದವಾನಿಮಠ ತಿಳಿಸಿದರು.

ಸಮಿತಿಯ ಅಬ್ದುಲ್​ರಜಾಕ ತಹಶೀಲ್ದಾರ, ನಿಂಗನಗೌಡ್ರ ಪಾಟೀಲ, ಬಾಪುಗೌಡ್ರ ಪಾಟೀಲ, ಮಲ್ಲಿಕಾರ್ಜುನ ನರೇಗಲ್, ದೇವರಾಜ ಅರಳಿಕಟ್ಟಿ, ನಾಗರಾಜ ಮೇಳ್ಳಳ್ಳಿ, ಶರಣಬಸವ ಬಿ.ಕೆ., ರವಿ ಕುರಗೋಡಿ, ಕೃಷ್ಣಾ ಆಲದಕಟ್ಟಿ, ಮಂಜುನಾಥ ವಳಗೇರಿ, ನೀಲಪ್ಪ ಕುರಿ, ಮಹದೇವಪ್ಪ ಸುಂಕದ, ತಾನೋಜಿ ತಾಂಬೆಕರ, ಮಹೇಶ ಅರಳಿಕಟ್ಟಿ, ಆನಂದ ವಳಗೇರಿ, ಸತೀಶ ವಳಗೇರಿ, ನನ್ನೆಸಾಬ ದೇವಗಿರಿ, ನಾಗಪ್ಪ ಬಳಿಗಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net