ದೊರೆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡಲು ಆಗ್ರಹ: ಮಾನವ ಹಕ್ಕುಗಳ ರಕ್ಷಣಾ ಪಡೆ ಒತ್ತಾಯ

Demand to give National Award to Dore film Mandya
Published on

ಮಂಡ್ಯ: ನಟ ಡಾ.ಶಿವರಾಜ್ ಕುಮಾರ್ ಅಭಿನಯದ ದೊರೆ ಚಲನಚಿತ್ರಕ್ಕೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಭಾರತ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಜೀತಪದ್ಥತಿ ವಿರೋಧಿಸುವುದು ನಮ್ಮ ಉದ್ದೇಶವಾಗಿದೆ. 1995 ಕಾಲಘಟ್ಟದಲ್ಲಿ ಜೀತ ಪದ್ಧತಿ ದೇಶಾದ್ಯಂತ ತಾಂಡವವಾಡುತ್ತಿದ್ದ ಸಮಯದಲ್ಲಿ ಜೀತ ಪದ್ಧತಿ ವಿರೋಧಿಸಿ ಬಂದ ನಮ್ಮ ದೇಶದ ಜನರಲ್ಲಿ ಅರಿವು ಮೂಡಿಸಿದ ಚಲನಚಿತ್ರ ನಟ ಶಿವರಾಜ್ ಕುಮಾರ್ ಅಭಿನಯದ ಶಿವಮಣಿ ನಿರ್ದೇಶನದ ದೊರೆ ಎಂಬ ಚಿತ್ರ. ಆದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

ದೊರೆ ಚಲನಚಿತ್ರ ತೆರೆಗೆ ಬಂದು ಬರೋಬ್ಬರಿ 30 ವರ್ಷ ಕಳೆದಿದೆ. ಸಹ ಇದೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾದುದ್ದನ್ನು ಯಾವುದೇ ಸರ್ಕಾರ ಪರಿಗಣಿಸದೆ ನಮ್ಮ ಭಾಷೆಯ ಹೆಮ್ಮೆಯ ದೊರೆ ಚಲನಚಿತ್ರಕ್ಕೆ ಉತ್ತಮ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ರೇಣುಕಾ, ಭೀಮೇಶ್, ಧನರಾಜ್, ಸುಂದರ್, ಎಸ್.ಮಹೇಶ್, ಸುನೀಲ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net