

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾಜಿ ಮುಖ್ಯಮಂತ್ರ ಡಿ. ದೇವರಾಜ ಅರಸು ಅವರಿಗೆ ರಾಜ್ಯ ಸರ್ಕಾರವು ಮರಣೋತ್ತರ "ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಬಸವ ಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮೈಸೂರು ರಾಜ್ಯಕ್ಕೆ "ಕರ್ನಾಟಕ ರಾಜ್ಯ' ಎಂದು ಸರ್ವ ಸಮ್ಮತದೊಂದಿಗೆ ಘೋಷಿಸಿದ, ಧೀಮಂತ ನಾಯಕ ದೇವರಾಜ ಅರಸು ಅವರು. ಇಡೀ ದೇಶದಲ್ಲಿ ಸಾಧ್ಯವಾಗದ "ಊಳುವವನೇ ಭೂಮಿ ಒಡೆಯ' ಎಂಬ ಕ್ರಾಂತಿಕಾರಿ ಭೂಸುಧಾರಣೆ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಯಲ್ಲಿ ತಂದ ಮಹಾನ್ ನಾಯಕ. ಇಂತಹ ಅಪ್ರತಿಮ ನಾಯಕನಿಗೆ ಮರಣೋತ್ತರವಾಗಿ "ಕರ್ನಾಟಕ ರತ್ನ" ಪ್ರಶಸ್ತಿ ನೀಡಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.