ಕಟ್ಟಡ ಕಾರ್ವಿುಕರ ಬೇಡಿಕೆ ಈಡೇರಿಸಲು ಒತ್ತಾಯ

Demand to fulfill the demands of construction workers
Published on

ಸವಣೂರ: ಕಟ್ಟಡ ಕಾರ್ವಿುಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಸಂಘಟನೆ ತಾಲೂಕು ಘಟಕ ಹಾಗೂ ಡಿವೈಎಫ್​ಐ ಸಂಘಟನೆ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ಭರತರಾಜ್ ಕೆ.ಎನ್. ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

2022-2023ನೇ ಸಾಲಿನಲ್ಲಿ ಮದುವೆ ಸಹಾಯಧನಕ್ಕೆ ಸಲ್ಲಿಸಿರುವ ಅರ್ಜಿ ಪರಿಗಣಿಸಿ, ಬಿಡುಗಡೆಗೊಂಡ ಅನುದಾನ ತಡೆಹಿಡಿಯಲಾಗಿದೆ. ಈ ಅನುದಾನ ಕೂಡಲೇ ಬಿಡುಗಡೆಗೊಳಿಸಬೇಕು. ರದ್ದಾದ ಕಾರ್ವಿುಕ ಕಾರ್ಡ್​ಗಳ ಮರು ಪರಿಶೀಲನೆ ಮಾಡಿ ಅರ್ಹ ಕಾರ್ವಿುಕರಿಗೆ ಕಾರ್ಡ್ ವಿತರಣೆ ಮಾಡಬೇಕು. ಮಹಿಳಾ ಕಾರ್ವಿುಕರು ನವೀಕರಣಕ್ಕೆ ಸಲ್ಲಿಸಿರುವ ಕಾರ್ಡ್​ಗಳನ್ನು ಕೂಡಲೇ ನವೀಕರಿಸಿ ಕೊಡಬೇಕು. ಅರ್ಹರಿಗೆ ಅನ್ಯಾಯವಾಗದಂತೆ ನಿಗಾ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.

ಕಾರ್ವಿುಕ ಇಲಾಖೆ ನಿರೀಕ್ಷಕರು ಕಾರ್ಡ್ ನವೀಕರಣ ಮಾಡದೆ, ಸುಮಾರು ಎಂಟು ತಿಂಗಳಿನಿಂದ ಕಾರ್ವಿುಕರನ್ನು ಅಲೆದಾಡಿಸುತ್ತಿದಾರೆ. ಅರ್ಹರಿದ್ದರೂ ಕಾರ್ಡ್ ಮಂಜೂರು ಮಾಡುತ್ತಿಲ್ಲ. ವೈದ್ಯಕೀಯ ವೆಚ್ಚ, ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರದ ಯೋಜನೆ ಸೌಲಭ್ಯ ನೀಡುತ್ತಿಲ್ಲ. ಇದರಿಂದ ತಾಲೂಕಿನ ಕಾರ್ವಿುಕರಿಗೆ ತೊಂದರೆ ಆಗುತ್ತಿದೆ. ಅನರ್ಹರಿಗೆ ಕಾರ್ವಿುಕ ಕಾರ್ಡ್ ವಿತರಿಸಿ, ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕ್ರಮ ಕೈಕೊಳ್ಳಬೇಕು. ಕೂಡಲೇ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಡಿವೈಎಫ್​ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಕಾರ್ವಿುಕ ಸಂಘಟನೆಯ ಪದಾಧಿಕಾರಿಗಳಾದ ಸಲಾಮಸಾಬ್ ಮುಲ್ಲಾ, ನಿಂಗನಗೌಡ ದೊಡ್ಡಮನಿ, ಭವಾನಿ ಗುಡಗೇರಿ, ಮೀನಾಕ್ಷಿ ಸೂರಟೂರ, ಚನ್ನವೀರಯ್ಯ ಹಿರೇಮಠ, ಇರ್ಷಾದ್ ಮೋನಾಶಿ, ಮಂಜುನಾಥ ಮೆಳ್ಳಳ್ಳಿ, ರಿಯಾಜಹ್ಮದ್ ಕೋಟೆನವರ, ರಿಯಾಜಅಹ್ಮದ ಮರ್ಪಾಜಿ, ಹಜರತಲಿ ನದಾಫ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net