ಕಬ್ಬಿಗೆ 4500 ರೂ. ನಿಗದಿಪಡಿಸಲು ಆಗ್ರಹ

10BANNU1
Published on

ಬನ್ನೂರು: ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಕಬ್ಬು ಬೆಳೆದಿದ್ದು, ಪ್ರತಿ ಟನ್‌ಗೆ 4500 ರೂ. ನಿಗದಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಸೀಹಳ್ಳಿ ರವಿ ಆಗ್ರಹಿಸಿದರು.

ಬಣ್ಣಾರಿ ಅಮ್ಮನ ಸಕ್ಕರೆ ಕಾರ್ಖಾನೆಗೆ ಬಹುತೇಕ ಮಂದಿ ಕಬ್ಬನ್ನು ಪೂರೈಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಕಾರ್ಖಾನೆಯ ಮಾಲೀಕರು ರೈತ ಸಂಘದ ಸಭೆಯನ್ನು ಕರೆದು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರತಿ ಟನ್ ಕಬ್ಬಿಗೆ 4500 ರೂ. ನಿಗದಿ ಮಾಡಬೇಕು. ರಂಗರಾಜನ ವರದಿಯಂತೆ ರೈತರಿಗೆ ಕೊಡಬೇಕಾದ ಉಪ ಉತ್ಪನ್ನದ ಲಾಭಾಂಶವನ್ನು ಕೂಡಲೇ ನೀಡಲು ಕ್ರಮ ಕೈಗೊಳ್ಳಬೇಕೆಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net