

ವಿಜಯಪುರ: ಜಿಲ್ಲೆಯಲ್ಲಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದವರನ್ನು ಹುಡುಕಿ ಹೊರ ಹಾಕುವಂತೆ ಒತ್ತಾಯಿಸಿ ಮೇ 5 ರಂದು ಬಿಜೆಪಿ ಜಿಲ್ಲಾ ಟಕ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.
ಅಂದು ಬೆಳಗ್ಗೆ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಪಹಲ್ಗಾಮ್ನಲ್ಲಿ ಹಿಂದುಗಳನ್ನು ಗುರಿಯಾಗಿಸಿ ಪಾಕಿಸ್ತಾನದ ಮುಸ್ಲಿಂ ಉಗ್ರರು ದಾಳಿ ನಡೆಸಿದ್ದರೂ ಕಾಂಗ್ರೆಸ್ ಮುಖಂಡರು ಧರ್ಮ ಕೇಳಿ ದಾಳಿ ನಡೆಸಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ. ದೇಶದ ಭದ್ರತೆ ಬಗ್ಗೆ ಕಾಂಗ್ರೆಸ್ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ದಾಳಿಗೆ ಭದ್ರತಾ ವೈಫಲ್ಯ ಕಾರಣ, ಸೂಕ್ಷ$್ಮ ಪ್ರದೇಶದಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಿಲ್ಲ, ಸರ್ವ ಪ ಸಭೆಗೆ ಪ್ರಧಾನಿ ಬರಲಿಲ್ಲ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ. ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮುಖಂಡರನ್ನು ಕೇಳಿ ಆಡಳಿತ ನಡೆಸುವ ಅಗತ್ಯ ಬಂದಿಲ್ಲ. ಅವರು ಆಡಳಿತ ನಡೆಸಲು ಸಮರ್ಥರಿದ್ದಾರೆ ಎಂದು ಛೇಡಿಸಿದರು.
ಶಿಣ ಇಲಾಖೆ ಅನಾಥ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು 34ನೇ ಸ್ಥಾನಕ್ಕೆ ಕುಸಿದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿ.ಪ. ಸದಸ್ಯ ಅರುಣ ಶಹಾಪೂರ, ರಾಜ್ಯ ಮತ್ತು ಜಿಲ್ಲೆಯಲ್ಲಿ ಶಿಣ ಸರ್ಕಾರದ ಆದ್ಯತೆಯಾಗಿ ಉಳಿದುಕೊಂಡಿಲ್ಲ. ಶಿಣ ಇಲಾಖೆಗೆ ಅಗತ್ಯ ಅನುದಾನ ನೀಡಿಲ್ಲ. ಶಿಕರ ಅರ್ಹತೆಗೆ ತಕ್ಕ ಬಡ್ತಿಯೂ ಸರ್ಕಾರ ನೀಡುತ್ತಿಲ್ಲ. ಜಿಲ್ಲೆಗೆ ಕಾಯಂ ಡಿಡಿಪಿಐ, ಬಿಇಒಗಳಿಲ್ಲ. ಶಿಣ ಇಲಾಖೆಯಲ್ಲಿ ಹಣಕ್ಕಾಗಿ ವರ್ಗಾವಣೆ ದಂಧೆ ನಡೆದಿರುವ ಪರಿಣಾಮ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಪಾತಾಳಕ್ಕೆ ಕುಸಿದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸಚಿವರ ಒಳಜಗಳ ಹಾಗೂ ಸಚಿವರು, ಶಾಸಕರಿಗೆ ಲಂಚ ಕೊಡಲಾಗದೆ ಜಿಲ್ಲೆಗೆ ಹೊಸದಾಗಿ ಡಿಡಿಪಿಐ ಆಗಿ ಬರಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಜಿಲ್ಲೆಯ ಡಿಡಿಪಿಐ ಹುದ್ದೆಗೆ ಮೂವರ ಹೆಸರು ಶಿಫಾರಸುಗೊಂಡರೂ ಯಾರನ್ನೂ ನೇಮಕ ಮಾಡಿಲ್ಲ. ಶಿಣ ಇಲಾಖೆ ದುಸ್ಥಿತಿಗೆ ತಲುಪಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದರು.
ಮುಂಬರುವ ಶೈಣಿಕ ಸಾಲಿನಲ್ಲಾದರೂ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಆದ್ಯತೆ ನೀಡಬೇಕು. ಫಲಿತಾಂಶ ಕುಸಿತದ ಕುರಿತು ಆತ್ಮಾವಲೋಕನ ಮಾಡಬೇಕು.
ಲೋಪದೋಷ ಸರಿಪಡಿಸಬೇಕು. ಸಂಬಂಧಪಟ್ಟವರನ್ನು ಹೊಣೆ ಮಾಡಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಉಮೇಶ ಕಾರಜೋಳ, ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಈರಣ್ಣ ರಾವುರ, ವಿಜಯ ಜೋಶಿ ಮತ್ತಿತರರಿದ್ದರು.